Showing posts with label ಬಡತನ ವ್ಯಾತಕೆ ನಮಗೆ ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ mahipati. Show all posts
Showing posts with label ಬಡತನ ವ್ಯಾತಕೆ ನಮಗೆ ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ mahipati. Show all posts

Wednesday, 1 September 2021

ಬಡತನ ವ್ಯಾತಕೆ ನಮಗೆ ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ ankita mahipati

ಬಡತನ ವ್ಯಾತಕೆ ನಮಗೆ ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ ಬಿಡುವವ ನಾನಲ್ಲ ನಿಮಗೆ 1 

ಪಿಡಿದು ಪಾದವ ನಿಮ್ಮ ಬಡವನೆಂದೆನಿಸಲು ಜಡನುಡಿ ನಿಮಗೆ ನಿಮಗೆ ಭೂಷಣವೆ ಬಿಡುಬಿಡು ಭಕ್ತವತ್ಸಲನೆಂಬ ಬಿರುದವ ಒಡಲ ಹೊರೆವ ದೊಂದಿರದವಗೆ 2 

ಬಡವನಾಧಾರವೆಂದು ಕೊಂಡಾಡುತಿರಲಿನ್ನು ಬಡಿವಾರ ವ್ಯಾತಕ್ಕೆ ನಿಮಗೆ ನುಡಿ ಮಾತಿನಂತಲ್ಲ ಪೊಡಿವಿಯೊಳಗಿದು ಬಿಡುವಾಂಗಿಲ್ಲ ನಮ್ಮ ನಿಮಗೆ 3 

ಪಿಡಿದ ಪಾದವ ನಿಮ್ಮ ಬಿಡೆನೆಂಬ ದೃಢವಿದು ಒಡೆಯ ಕೇಳಿನ್ನಿ ಮಾತು ಬಿಡಿಸಿಕೊಂಡರೆ ನಿಮ್ಮ ಬಿಡುವರಾರಿನ್ನು ನೋಡು ತಿಳಿದು ಗುರುನಾಥ4 

ಅಡಿಗಳ ಕುಡಿಯೊಳುವಿಡಿದು ನಾ ನಿಮ್ಮನು ಬಡುವೆ ಸದ್ಗತಿ ಹರುಷವನು ಮೂಢಮಹಿಪತಿಗಿನ್ನು ಬ್ಯಾರೆ ಗತಿಯ ಕಾಣಿ ಒಡೆಯ ನಿಮ್ಮಪಾದಪದ್ಮದಾಣಿ 5

****