Showing posts with label ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ vijaya vittala MOSARU TANDINO RANA MAARGAVA BIDO. Show all posts
Showing posts with label ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ vijaya vittala MOSARU TANDINO RANA MAARGAVA BIDO. Show all posts

Thursday, 4 November 2021

ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ ankita vijaya vittala MOSARU TANDINO RANA MAARGAVA BIDO

 ರಾಗ  ಶಂಕರಾಭರಣ  ಆದಿತಾಳ
Audio by Vidwan Sumukh Moudgalya

ಶ್ರೀ ವಿಜಯದಾಸರ ರಚನೆ 


ಮೊಸರು ತಂದೀನೋ ರಂಗಾ ಮಾರ್ಗವ ಬಿಡೋ
ಕಿಸರು ಹೊರಲಿ ಬೇಡ ಕೆಲಕೆ ಸಾರೋ॥ಪ॥

ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ
ಹಸನಾದ ಮುತ್ತಿನ ಸರಗಳು ಹರಿದಾವೋ
ನಿಶಿಯು ವೇಳ್ಯೆಯು ಅಲ್ಲ ನಿನಗೆ ಬುದ್ಧಿಯು ಸಲ್ಲಾ
ವಶಕರವಾಗುವಳೆ ವಳವು ಇಲ್ಲದೆ॥೧॥

ಎದೆಯು ಮುಟ್ಟಲಿ ಬೇಡ ಎಳೆನಗೆ ನಗಲಿಬೇಡ
ಬದಿಬಗಲು ಪಿಡಿದು ನೋಡುವರೆ ಹೀಗೆ
ಕದವ ಮುಚ್ಚಿಕೊಂಡು ಕಾಕು ಎಬ್ಬಿಸುವರೆ
ಸದನಕ್ಕೆ ಹೋಗಬೇಕು ಸರಸವೇಕೋ॥೨॥

ಹಿಂದೆ ಬಂದವರು ಏನೆಂದು ವಲಿತರು ಕಾಣೋ
ಒಂದಿಷ್ಟು ಚಂದವಿಲ್ಲ ಚಲುವಿಕೆ ಇಲ್ಲಾ
ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ
ಮಂದಿರಜೆ ಬಾರೋ ನಿನ್ನ ಮನಸು ದಣಿಸುವೆ॥೩॥
***

Mosaru tandino ranga margava bido
Kisaru horali beda kalake saro ||pa||

Pasugavi ni enna hesarugolalibeda
Hasanada muttina saragalu haridavo
Niseya veleyu alla ninage buddhiyu salla
Vasakaravaguvale olavu illade ||1||

Edeya muttali beda elenage nagali beda
Badi bagalu pididu nodavare hige
Kadava muccikondu kaku ebbisuvare
Sadanakke hogabeku sarasaveko ||2||

Hinde bandavaru Enendu olidaro kane
Ondishtu chendavilla celuvikeyilla
Kandarpakoti teja vijayaviththala enna
Mandirake baro ninna manasu danisuve ||3||
***

pallavi

mosaru tandinI ranga mArgava biDO kisaru horalibEDA kelakesArO

caraNam 1

pashugAvi nIyenna hesarugoLali bEDA hasanAda muttina saragaLu haridAvO
nishay vELayu allA ninage buddhiyu sallA vashakara vAguvaLe valavu illade

caraNam 2

edayamuTTali bEDA eLe nage nagali bEDA badi bagalu piDidu nODuvare hIge
kadava muccikoNDu kAku ebbisuvare sadana kke hOga bEku sarasavEkO

caraNam 3

hinde bandvaru Enendu olidarO kANe ondiSTu candavillA ceulike illA
kanadarpa kOTi tEja tEja vijayaviThala enna mandike bArO ninna manasu daNIsuve
***

ರಾಗ :  ಶಂಕರಾಭರಣ  ತಾಳ : ಆದಿ 

ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ 
ಕಿಸರು ಹೊರಲಿ ಬೇಡ ಕಲಕೆ ಸಾರೊ                                  ।।ಪ॥ 

ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ 
ಹಸನಾದ ಮುತ್ತಿನ ಸರಗಳು ಹರಿದಾವೋ
ನಿಶೆಯ ವೇಳೆಯು ಅಲ್ಲಾ ನಿನಗೆ ಬುದ್ಧಿಯು ಸಲ್ಲಾ 
ವಶಕರವಾಗುವಳೆ ಒಲವು ಇಲ್ಲದೆ                                      ।।೧।।

ಎದೆಯ ಮುಟ್ಟಲಿ ಬೇಡ ಎಳೆನಗೆ ನಗಲಿ ಬೇಡ 
ಬದಿ ಬಗಲು ಪಿಡಿದು ನೋಡವರೆ ಹೀಗೆ 
ಕದವ ಮುಚ್ಚಿಕೊಂಡು ಕಾಕು ಎಬ್ಬಿಸುವರೆ 
ಸದನಕ್ಕೆ ಹೋಗಬೇಕು ಸರಸವೆಕೋ                                   ।।೨।।

ಹಿಂದೆ ಬಂದವರು ಏನೆಂದು ಒಲಿದರೊ ಕಾಣೆ 
ಒಂದಿಷ್ಟು ಚೆಂದವಿಲ್ಲ ಚೆಲುವಿಕೆಯಿಲ್ಲಾ 
ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ 
ಮಂದಿರಕೆ ಬಾರೊ ನಿನ್ನ ಮನಸು ದಣಿಸುವೆ                           ।।೩।।
**********