Showing posts with label ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ karpara narahari. Show all posts
Showing posts with label ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ karpara narahari. Show all posts

Monday, 2 August 2021

ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ ankita karpara narahari

ಮರುತನಾತ್ಮಜ ನಿನ್ನ ಚರಣ ಕಮಲಯುಗ್ಮ

ನೆರೆನಂಬಿದವ ಧನ್ಯನೊ ಪ


ಧರೆಯೊಳಗೆ ರಘುವರನ ಶೇವಿಸಿ ಶರಣು ಜನರನು

ಪೊರೆವುದಕೆ ಭೂಸುರಗಣದಿ ರಾಜಿಸುವ ರಾಯಚೂರ

ಪುರದ ಕೋಟೆಯೊಳಿರಲು ಬಂದಿಹ ಅ.ಪ


ಖರವೈರಿಯಾಜ್ಞೆಯ ಶಿರದಿವಹಿಸಿ

ಬಹುಭರದಿವಾರಿಧಿ ಲಂಘಿಸಿ

ಧರಣಿಸುತೆಯಳ ಕಂಡೆರಗಿ ಮುದ್ರಿಕೆಯಿತ್ತು

ಹರಿಭಟನೆಂದು ತಿಳಿಸಿ

ವರ ಶಿರೋರತುನವ ಧರಿಸಿ ಕರದಿ ಬಂದು

ತ್ವರದಿ ರಾಮನಿಗರ್ಪಿಸಿ

ಕುಶಲವನೆ ತಿಳಿಸಿ ಪರಮ ಕರುಣವ ಪಡೆದ

ಧೀರನೆ ಸುರವಿನುತ ತವ

ಚರಣದೆಡೆಯೊಳ್ ನಿರುತ ಪೂಜೆಯಗೊಂಬ

ಪರಿಮಳವಿರಚಿಸಿದ ಗುರುವರರ ನೋಡಿದೆ 1


ಇಂದು ಕುಲದಿ ಪಾಂಡುನಂದನನೆನಸಿ

ಗೋವಿಂದನಂಘ್ರಿಯ ಭಜಿಸಿ

ಸಂದೇಹವ್ಯಾಕೆ ಖಳವೃಂದ ವಧವೆ ಯಜ್ಞವೆಂದು

ಮನದಿ ಭಾವಿಸಿ

ಸಿಂದೂರ ಜಲಜರಾಸಂಧಾದಿಗಳ ಮಥಿಸಿ

ನಂದಸುತನಿಗರ್ಪಿಸಿ ಪ್ರಥಮಾಂಗನೆನಿಸಿ

ವಂದಿಪರ ಭವಬಂಧ ಬಿಡಿಸ್ಯಾನಂದಗರಿವ

ಸಮರ್ಥ ತವಪದ ಕೊಂದಿಸುವೆ ಮನ

ಮಂದಿರದಿ ಯದುನಂದನನ ಪದದ್ವಂದ್ವ ತೋರಿಸು 2


ಕ್ಷಿತಿಸುರ ಗೃಹದೊಳಚ್ಯುತನಾಜ್ಞದಿಂ

ಪುಟ್ಟಿಯತಿರೂಪವನೆಧರಿಸಿ

ಕ್ಷಿತಿಯೊಳಗಖಿಲ ದುರ್ಮತಗಳೆಂಬುವ

ಮೇಘತತಿಗೆ ಮಾರುತನೆನಿಸಿ

ಶೃತಿತತಿಯಿಂದೆ ಶ್ರೀಪತಿಯೆ ಉತ್ತಮನೆನಿಸಿ

ಪ್ರತಿಪಾದ್ಯನೆಂದು ತಿಳಿಸಿ ಸುಖ

ತೀರ್ಥರೆನಿಸಿ ಅತಿಹಿತದಿ ಸತ್ಪಥವ ತೋರಿದಿ

ಅತುಳ ಮಹಿಮನೆನುತಿಸುವೆನು

ತ್ವತ್ಕøತ ಸುಶಾಸ್ತ್ರವನರಿತ ಬುಧಜನ ತತಿಯ ಸಂಗವ

ಸತತ ಪಾಲಿಸೋ 3


ಫಣಿ ಪಾಶದಿಂದ ರಾವಣಿಯು ಕಪಿಗಳ ಬಿಗಿಯೆ

ತನುಮರೆಯಲು ಧುರದಿ

ಕ್ಷಣಕಾಲದಲಿ ಸಂಜೀವನ ಗಿರಿತಂದು

ಜೀವನವಿತ್ತಕಾರಣದಿ ವನಜನಾಭನು

ಮೆಚ್ಚಿ ನಿನಗಿತ್ತ ಸಂಜೀವನೆಂಬೊ ನಾಮದ

ದಯದಿ ತನ್ಮೂರ್ತಿ ಸಹಿತದಿ

ಅನಿಲಜನೆ ತಟಿತ್ಕೋಟಿ ಮಂದಿರನೆನಿಸಿ

ಸೇವಕಜನರ ಸಲಹುವಿ

ಅನುದಿನದಿ ದ್ವಿಜವರ್ಯರಿಂದರ್ಚನೆಯ

ಕೊಳುತಲಿ ಮೆರೆವದೇವನೆ 4


ನಿರುತ ಸಮ್ಮುಖದಲ್ಲಿ ಅರಿದರಾಭಯಹಸ್ತ

ಶಿರದಿ ಮುಕುಟ ಮಂಡಿತ

ಪರಮಸುಂದರವಾದ ಶಿರಿವಲ್ಲಭನ ಮೂರ್ತಿ

ದರುಶನವನೆ ಕೊಳ್ಳುತ

ಪರಿಶೋಭಿಸುವ ಸದ್ಗೋಪುರಯುಕ್ತವಾದ

ವಿಸ್ತರ ಮಂಟಪದಿರಾಜಿತ

ಸುರಪೂಜಿತ ಕÀರುಣ ಶರಧಿಯೆ ಪೊರೆವದೆನ್ನನು ಶರಣು ಜನರಘ

ತರಿದಭೀಷ್ಟೆಯಗರಿವ ಕಾರ್ಪರನಿಲಯ ಸಿರಿನರಹರಿಯ

ಕರುಣವ ಪಡೆದ ಧೀರನೆ 5

****