Showing posts with label ನಂಬಿದೆನೊ ನಿನ್ನ ನಿಖಿಳ ಗುಣಗಣ ಪೂರ್ಣ krishnavittala. Show all posts
Showing posts with label ನಂಬಿದೆನೊ ನಿನ್ನ ನಿಖಿಳ ಗುಣಗಣ ಪೂರ್ಣ krishnavittala. Show all posts

Monday 2 August 2021

ನಂಬಿದೆನೊ ನಿನ್ನ ನಿಖಿಳ ಗುಣಗಣ ಪೂರ್ಣ ankita krishnavittala

ನಂಬಿದೆನೊ ನಿನ್ನ ನಿಖಿಳ ಗುಣಗಣ ಪೂರ್ಣ ಪ


ಅಂಬುಜಾಸನ ಜನಕ ನರಹರಿ

ಅಂಭ್ರಣೀ ಜಗನ್ನಾಥ ನಾಯಕ

ಬಿಂಬ ವಿಷ್ಣುವೆ ನಿಖಿಳವಿಶ್ವಕೆ

ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ.


ತಂದೆಕಾರಣ ಭವದೀ- ನೀ ಎನ್ನ

ಬಂದೆನಲ್ಲದೆ ನಿಜದೀ- ಸುಖಪೂರ್ಣ

ನಿಂದು ನಡೆಸದೆ ಭವದೀ- ದಾಟಿನ್ನ

ಎಂದಿಗಾದರು ಗೆಲ್ಲುವೆನೆ ಘನ್ನ

ಬಂಧನಪ್ರದ ನೀ ಬಂಧಮೋಚಕ

ತಂದ ವಿಷ್ಣುವೆ ಮೂಲಕಾರಣ

ವೆಂದು ಶೃತಿಗಳವೃಂದ ನುಡಿವುವು

ಬಂದು ನಿನಗಿಂತಧಿಕರಾರೈ

ನಿಂದು ಹೃದಯದಿ ಸರ್ವಕಾಲದಿ

ತಂದು ಉಣಿಸುವೆ ಸಕಲ ವಿಷಯವ

ಬಂಧಿ ನಾನಿಹೆ ಜಡವೆ ನೀ ಬಿಡೆ

ಮುಂದಿನಾಗತಿ ಬೇಗ ತೋರೈ

ಇಂದಿರೇಶ ಮಹೇಂದ್ರ ಸುಖಮಯ

ಕಂದರಾಶ್ರಯ ಬ್ರಹ್ಮಮಂದಿರ

ನಂದಿವಾಹನ ತಾತ ವಿಭುವರ

ಚಂದಗೋಚರ ಸಾರ್ವಭೌಮನೆ

ಕೂಂದುನಕ್ರನ ಗಜವ ಸಲಹಿದೆ

ನಂದನೀಡಿದೆ ಪಾರ್ಥಮಡದಿಗೆ

ತಿಂದು ಎಂಜಲ ಕಾಯ್ದೆ ಶಬರಿಯ

ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ

ಕಂದ ಕೂಗಲ್ ಬಂದೆ ಕಂಭದಿ

ಇಂದ್ರ ಗೋಸುಗ ಬಲಿಯ ಬೇಡದೆ

ಮಂದರಾದ್ರಿಯ ಪೊತ್ತೆ ಸುರರಡೆ

ಸುಂದರಾಂಗಿಯುಆದೆ ಹಾಗೆಯೆ

ಹಿಂದೆ ಈತೆರ ನಿತ್ಯತೃಪ್ತನೆ

ಬಂದು ಸಲಹಿದ ಭಕ್ತವೃಂದವ

ಮಂದನಾದರು ಶರಣುಬಿದ್ದವ

ನೆಂದು ಸಲಹೈ ಪೂರ್ಣಕರುಣಿಯೇ1


ಕೂಡಿಸುತ ಮನ ವಿಷಯ ಬಲೆಯಲ್ಲೀ

ಮಾಡಿಸುವೆ ಮಾಡಿದ್ದ ದಿನದಿನದೀ

ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ

ಕೇಡುಮೋಹ ಸಜಾಡ್ಯ ಹರಿಸಿಲ್ಲೀ

ಓಡಿಓಡಿಸೆ ಜಗವು ನಡೆವುದು

ನೋಡಿನೋಡಿಸೆ ನಾವು ನೋಳ್ಪೆವು

ಮಾಡಿಮಾಡಿಸೆ ಕರ್ಮವಾಹುದು

ಪ್ರೌಢ ನಿನ್ನಯ ಬಲದ ವಿಶ್ವಕೆ

ಕಾಡಿಕಾಡಿಪ ವಿಷಯ ಬಿಡಿಸುತ

ಹಾಡಿಹಾಡಿಸಿ ನಿಮ್ಮ ಕೀರ್ತನೆ

ಆಡಿಆಡಿಸಿ ಸಾಧುಸಂಗದ

ಜಾಡುತೋರಿಸೊ ಭಕ್ತಿ ಮಾರ್ಗದ

ಕ್ರೋಢನರಹರಿ ಮತ್ಸ್ಯವಾಮನ

ಪ್ರೌಢ ಭಾರ್ಗವ ರಾಮಕೃಷ್ಣನೆ

ಗಾಡಿಕಾರ ಪರೇಶ ಬುದ್ಧನೆ

ದೂಡು ಕಲಿಯನು ಕಲ್ಕಿದೇವನೆ

ಕೂಡು ಮನದಲಿ ಬಾದರಾಯಣ

ನೀಡು e್ಞÁನವ ಜೀಯ ಹಯಮುಖ

ಮಾಡು ದತ್ತಾತ್ರೇಯ ಕೃಪೆಯನು

ಈಡುಕಾಣದು ಕಪಿಲಮೂರ್ತಿಯೆ

ಬೀಡುಗೈದಿಹ ಬೀಜ ನಿದ್ರೆಯು

ನೋಡಗೊಡದೈ ನಿನ್ನತುರ್ಯನೆ

ನಾಡುದೈವಗಳನ್ನು ಭಜಿಸಲು

ಓಡದದು ಎಂದೆಂದು ಸತ್ಯವು

ಮಾಡುತಲಿ ಸಾಷ್ಟಾಂಗ ನತಿಗಳ

ಜೋಡಿಸಿಹೆ ಶಿರ ಪಾದಪದ್ಮದಿ

ಗಾಢಪ್ರೇಮದಿ ಸಲಹು ಭೂಮನೆ

ಮೂಡಿಸುತನಿಜ ಭಕ್ತಿ e್ಞÁನವ 2


ಎನ್ನ ಯೋಗ್ಯತೆ ನೋಡೆ ಫಲವಿಲ್ಲ

ನಿನ್ನಕೃಪೆ ತೋರದಿರೆ ಗತಿಯಿಲ್ಲ

ಅನ್ಯ ಹಾದಿಯು ಯಾವುದೆನಗಿಲ್ಲ

ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ

ಪೂರ್ಣe್ಞÁನಾನಂದ ಶಾಶ್ವತ ಪೂರ್ಣ ಚಿನ್ಮಯ

ಪೂರ್ಣ ಮೂಲದಿ ಪೂರ್ಣ ನಂದದಿ

ಪೂರ್ಣ ಅವಯವಿ ಪೂರ್ಣಶಕ್ತನೆ

ಪೂರ್ಣಬೋಧ ಮುನೀಂದ್ರ ವಂದಿತ

ಪೂರ್ಣಕರುಣಾ ಶರಧಿ ದೇವನೆ

ಪೂರ್ಣನಿತ್ಯಾನಂದ ದಾಯಕ

ಪೂರ್ಣಮಾಡೈ ಬಯಕೆ ತೂರ್ಣದಿ

ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ

ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ

ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ

ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು

ನಿನ್ನಸಮ ಉತ್ಕøಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು

ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ

ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ

ಘನ್ನಜಯಮುನಿ ವಾಯುಮಂದಿರ ಚೆನ್ನ

ಸಿರಿಪತಿ ಕೃಷ್ಣವಿಠಲನೇ 3

****