time at 0.55
ದೇವಕಿನಂದನ ಹರಿ ವಾಸುದೇವ
ದೇವಕಿನಂದನ ಹರಿ ವಾಸುದೇವ ||ಪ||
ಕಂಸಮರ್ದನ ಹರಿ ಕೌಸ್ತುಭಾಭರಣ
ಹಂಸ ವಾಹನ ಮುಖ ವಂದಿತ ಚರಣ ||
ಶಂಖ ಚಕ್ರಧರ ಶ್ರೀಗೋವಿಂದ
ಪಂಕಜಲೋಚನ ಪೂರ್ಣಾನಂದ ||
ಮಕರಕುಂಡಲಧರ ಶತರವಿಭಾಸ
ರುಕುಮಿಣಿವಲ್ಲಭ ಸಕಲಲೋಕೇಶ ||
ನಿಗಮೋದ್ಧಾರ ನವನೀತಚೋರ
ಖಗಪತಿವಾಹನ ಜಗದಾಧಾರ ||
ವರವೇಲಾಪುರ ಚೆನ್ನಪ್ರಸನ್ನ
ಪುರಂದರವಿಠಲ ಸದ್ಗುಣಪೂರ್ಣ ||
****
ರಾಗ ಸಾರಂಗ. ಆದಿ ತಾಳ (raga, taala may differ in audio)