Showing posts with label ಕೇಶವ ಮಾಧವ ತೀರ್ಥಾ ಯತಿ ವಾಸಿಪ ವೃಂದಾವನದಲ್ಲಿ ಖ್ಯಾತಿ gopalakrishna vittala. Show all posts
Showing posts with label ಕೇಶವ ಮಾಧವ ತೀರ್ಥಾ ಯತಿ ವಾಸಿಪ ವೃಂದಾವನದಲ್ಲಿ ಖ್ಯಾತಿ gopalakrishna vittala. Show all posts

Sunday, 1 August 2021

ಕೇಶವ ಮಾಧವ ತೀರ್ಥಾ ಯತಿ ವಾಸಿಪ ವೃಂದಾವನದಲ್ಲಿ ಖ್ಯಾತಿ ankita gopalakrishna vittala

ಕೇಶವ ಮಾಧವ ತೀರ್ಥಾ ಯತಿ

ವಾಸಿಪ ವೃಂದಾವನದಲ್ಲಿ ಖ್ಯಾತಿ ಪ.


ವಾಸುದೇವನ ಭಕ್ತ ಸುಜನಕೆ ಪ್ರೀತಿ

ಸೂಸುತ ಪೊರೆಯುವ ಕರುಣಿ ಪ್ರತೀತಿ ಅ.ಪ.


ಭದ್ರಾವತಿಯ ತೀರ ನರಸಿಂಹ ಕ್ಷೇತ್ರ

ಭದ್ರಾವತೀ ಪುರ ಮಠದಿ ಸತ್ಪಾತ್ರಾ

ಮುದ್ದಾದ ವೀರ ರಾಮನ ಪ್ರೀತಿ ಗಾತ್ರಾ

ಪೊದ್ದಿಸಿಕೊಂಡಿಪ್ಪ ಶಿರದಿ ಪತಿತ್ರ 1

ಸ್ವಪ್ನದಿ ತೋರಿದ ಯತಿರೂಪದಿಂದ

ವಪ್ಪದಿ ದರ್ಶನಕೆ ಬಾರೆಂದು ನುಡಿದಾ

ಅಪ್ಪ ತಿಮ್ಮಪ್ಪನ ಸ್ತುತಿಯನಾಲಿಸಿದಾ

ಬಪ್ಪ ನರ ದರ್ಶನಕೆ ಮುಂದೆ ನಿಲ್ಲಿಸಿದಾ2

ಎನ್ನಿಂದ ಸಾರೋದ್ಧಾರ ಪದವನ್ನು

ಎನ್ನಲ್ಲೆ ನಿಂತು ತಾ ಬರಸಿದ ಘನ್ನ

ತನ್ನ ದೇವತ್ವವ ತೋರ್ದ ಪ್ರಸನ್ನ

ಇನ್ನಿಂಥ ಕರುಣಿಯ ಕಾಣೆ ನಾ ಮುನ್ನ 3

ಮಧ್ವಕರ ಸಂಜಾತ ಮಾಧವರಂತೇ

ಶುದ್ಧ ಈ ಯತಿಕುಲ ಸಂಜಾತನಂತೇ

ಭದ್ರಾವತೀ ಪುರದಲ್ಲಿ ವಾಸಂತೇ

ಮುದ್ದು ಕೇಶವ ಮಾಧವಾತೀರ್ಥನಂತೆ 4

ಕಾಮಿತಾರ್ಥವ ನಂಬೆ ಕೊಡುತಿಪ್ಪನಂತೆ

ಕಾಮಚಾರಿಗಳೀಗೆ ತೋರ್ಪನಲ್ಲಂತೆ

ಸ್ವಾಮಿ ರಾಮನ ಜಪಮೌನ ವ್ರತವಂತೆ

ಈ ಮಹಿಯಲಿ ಯೋಗಿ ಅವಧೂತನಂತೆ 5

ಭಾಗಾವತಾದಲ್ಲಿ ಬಹು ದೀಕ್ಷಾಯುತರು

ಬಾಗಿದ ಜನರಿಗೆ ಪ್ರೇಮ ತೋರುವರು

ಭಾಗವತವ ರಾಜಗ್ಹೇಳಿದರಿವರು

ಬೇಗರಿತುಕೊಳ್ಳಿರಿ ಬಹುಗೋಪ್ಯಯುತರು 6

ನಂಬಿದ ಜನರಿಂದ ಹಂಬಲೊಂದಿಲ್ಲ

ತುಂಬಿದ ಭಕ್ತಿ ಆತ್ಮಾರ್ಪಣೆ ಬಲ್ಲ

ಸಂಬ್ರಹ್ಮದಿಂ ನಲಿವ ಗುರುಭಕ್ತಿ ಬೆಲ್ಲ

ಕುಂಭಿಣಿ ಮೂಢರಿಗೀವನು ಬಲ್ಯಾ 7

ಎನ್ನ ಶ್ರೀ ಗುರು ತಂದೆ ಮುದ್ದುಮೋಹನ್ನ

ಘನ್ನರ ಕೃಪೆಯಿಂದ ಈ ಮುನಿವರನಾ

ಸನ್ನುತ ಸುಗುಣವ ಕಂಡ ನಾ ನಿನ್ನ

ಚನ್ನ ಶ್ರೀ ಲಕ್ಷ್ಮೀ ನರಸಿಂಹ ತೋರ್ದರನಾ 8

ಸ್ವಾಪರೋಕ್ಷಿಯ ವೃಂದಾವನಸ್ಥಾ

ಗೋಪ್ಯದಿ ವಾಸಿಪ ಮಹಿಮ ವಿಖ್ಯಾತಾ

ಗೋಪಾಲಕೃಷ್ಣವಿಠಲನ ಕೃಪಾ ಪಾತ್ರಾ

ಕಾಪಾಡು ತವ ದಾಸದಾಸರ ನಿರುತಾ 9

****