Showing posts with label ಸಾಕೇತಪುರ ವಾಸಿ ಕಪಟವೇಷ ಶ್ರೀಕಮಲನಾಭನ ನಖದಲಿ ಕಾಶೀ vijaya vittala. Show all posts
Showing posts with label ಸಾಕೇತಪುರ ವಾಸಿ ಕಪಟವೇಷ ಶ್ರೀಕಮಲನಾಭನ ನಖದಲಿ ಕಾಶೀ vijaya vittala. Show all posts

Thursday, 17 October 2019

ಸಾಕೇತಪುರ ವಾಸಿ ಕಪಟವೇಷ ಶ್ರೀಕಮಲನಾಭನ ನಖದಲಿ ಕಾಶೀ ankita vijaya vittala

ವಿಜಯದಾಸ
ಸಾಕೇತಪುರ ವಾಸಿ ಕಪಟವೇಷ |
ಶ್ರೀಕಮಲನಾಭನ ನಖದಲಿ ಕಾಶೀ ಪ

ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು |
ವಿಶ್ವ ವಿಶ್ವಬಾಹು ವಿಶ್ವರೂಪ ರೂಪ ||
ವಿಶ್ವ ಬ್ರಹ್ಮಾಂಡ ಆಧಾರ ಕಾರಣ |
ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ 1

ಪರಿಯಂತ ರೋಮಕೂಪ |
ಅಗಣಿತ ಕಮಲಜ |
ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು |
ನಾಸ್ತಿ ವಿಷ್ಣು ಪರದೈವ ಇಹಪರದಲಿ2

ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ |
ಸೃಷ್ಟಿಸುವ ಕಣ್ಣು ಎವೆ ಹಾಕುವ ||
ಅಷ್ಟರೊಳನೇಕ ಬ್ರಹ್ಮಾಂಡ ನಾಟಕ |
ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ 3

ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ |
ಮೃತ್ಯು ಹಾ ಕಾಲಪ್ರಮಾಣ ಪರುಷಾ ||
ಶರಧಿ |
ಸತ್ಯ ಸಂಕಲ್ಪ ನಿಷ್ಠನಾಹಂತೆ 4

ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ |
ಭುಜಧರನಯ್ಯಯಾ | ಅಮಿತಕಾಯಾ |
ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ |
ಭುಜಗಗಿರಿ ವಿಜಯವಿಠ್ಠಲ ವೆಂಕಟೇಶಾ 5
**********