Showing posts with label ಸೇರಿದೆನೊ ಬಂದು ಸಂಕಟದಲಿ ನೊಂದು vijaya vittala. Show all posts
Showing posts with label ಸೇರಿದೆನೊ ಬಂದು ಸಂಕಟದಲಿ ನೊಂದು vijaya vittala. Show all posts

Wednesday, 16 October 2019

ಸೇರಿದೆನೊ ಬಂದು ಸಂಕಟದಲಿ ನೊಂದು ankita vijaya vittala

ಶ್ರೀ ವಿಜಯದಾಸರು ರಚಿಸಿದ ಆಪತ್ತು ಪರಿಹಾರ ಸ್ತೋತ್ರಂ.

ಸೇರಿದೆನೊ ಬಂದು ಸಂಕಟದಲಿ ನೊಂದು
ತಾರಿ ತುಟಿಯಾರಿ ದಾನವಾರಿ/

ಘೋರವಾದ ಕ್ರೂರರು ಒಳಗೆ ಈ--
ವಾರು ಒಂದಾಗಿ ಮೆದ್ದಾರು ಚೆನ್ನಾಗಿ/

ನೂರು ನೂರು ಬೇರು ಒಲ್ಲೆನೆಂದರೆ ಮೂರು
ಬಾರಿ ಕುಡಿಸಿದರು ಒಂದೊಂದು ಸೇರು

ಪುರಾತನ ನಾಮ ವಿಜಯವಿಠ್ಠಲ ಪ್ರೇಮ/
ಆರೈದು ಸಲಹುವವರ ಕಾಣೆ ಬಲ್ಲವರ/

ನಾರಾಯಣ ನೆಂಬ ವೀರವೈದ್ಯನ ಕಂಡೆ/
ಕಾರುಣ್ಯದಲಿ ತನ್ನ ಚರಣಾಂಬಿಲಿ ಚಿಂ/

ತಾರತುನ ಮಾತ್ರೆ ಅರೆದು ಪೂರ್ಣವಾಗಿ
ಕರ ಕೊಟ್ಟನು ನೋಡು ಕರದು ಸಮೀಪಕ್ಕೆ/

ಶಾರೀರವೆ ಉಂಡು ಎದಿಗೆ ಹತ್ತಿದ ಮದ್ದು/
ಕಾರಿಸಿತು ಬಹು ವ್ಯಾಪ್ತವಾಗಿದ್ದದ್ದು/

ಪೂರಾಯಿತೆ ನಾಮಾ ವಿಜಯವಿಠ್ಠಲ ಮುಂದೆ/
ಪೊರೆವ ದುರುಳರು ಸೇರದಂತೆ ಒಲಿದು//

ಬಹು ದಿನದಲಿ ಇದ್ದ ಭವರೋಗ ಹಿಂಗಿತು/
ಸಹಿ ವಿಷ್ಣು ವಿಜಯವಿಠ್ಠಲ ವೈದ್ಯನಿಂದಲಿ//.

ಓಂ ಧಂ ಧನ್ವಂತರಿಯೆ ನಮಃ//.
*********