Showing posts with label ನಿನ್ನ ನಂಬಿದೆ ನೀರದಶ್ಯಾಮ ಎನ್ನ ಪಾಲಿಸೊ ಸೀತಾ purandara vittala. Show all posts
Showing posts with label ನಿನ್ನ ನಂಬಿದೆ ನೀರದಶ್ಯಾಮ ಎನ್ನ ಪಾಲಿಸೊ ಸೀತಾ purandara vittala. Show all posts

Friday, 6 December 2019

ನಿನ್ನ ನಂಬಿದೆ ನೀರದಶ್ಯಾಮ ಎನ್ನ ಪಾಲಿಸೊ ಸೀತಾ purandara vittala

ರಾಗ ಆನಂದಭೈರವಿ ಛಾಪುತಾಳ 

ನಿನ್ನ ನಂಬಿದೆ ನೀರದಶ್ಯಾಮ ||ಪ||
ಎನ್ನ ಪಾಲಿಸೊ ಸೀತಾರಾಮ ||ಅ||

ಪಾರವಿಲ್ಲದೆ ಸಂಸಾರವು ಅಪಾರವಾರಿಧಿಯೊಳು ಮುಣುಗಿದೆ ನಾನು
ನಾರಿ ಸುತರು ತನ್ನವರೆಂದು ಭ್ರಾಂತಿಯಲಿ ಬಿದ್ದು ನೊಂದೆನೊ ಹರಿಯೆ ||

ವೇದ ಶಾಸ್ತ್ರಂಗಳು ಓದಿ ವಾದಿಸಿ ಬಲು ಜನ್ಮ ಬಳಲಿದೆ ನಾನು
ಆದಿಮೂರುತಿ ಪಾದವನ್ನು ಅನುಸರಿಸದೆ ಲೋಕರಂಜಿತನಾದೆ ||

ಆರು ಗರ್ವಗಳು ಕೂಡಿ ಬರಿದೆ ಇಂದ್ರಿಯ ತಾನೆಲ್ಲ ನೋಡಿ
ತೋರಿದೆ ಹರಿದಾಸನೆಂದು ಗಾರುಡಿ ಮಾಡಿ ನಾ ಕಾಲವ ಕಳೆದೆ ||

ಪರಸತಿ ಪರದ್ರವ್ಯಗಳನೆ ಪರನಿಂದೆ ಪರದ್ರೋಹಗಳನೆ ಮಾಡಿದೆನೊ
ದುರಿತ ಪರ್ವತವೆತ್ತಿದೆನೊ ಸ್ಥಿರವಾದ ತನುವೆಂದು ಮರಣ ಜರೆದೆನೊ ||

ಬಂದೆನೊ ಬಹು ಜನ್ಮದಲ್ಲಿ ನೊಂದೆನೊ ವಿಷಯದ ಬಾಧೆಗಳಲ್ಲಿ
ಮುಂದೇನು ಗತಿಯೆನಗಿಲ್ಲ ತಂದೆ ನೀನಲ್ಲದೆ ಪುರಂದರವಿಠಲ ||
***

pallavi

ninna nambide nIrada shyAma

anupallavi

enna pAliso sItArAma

caraNam 1

bhAravillade samsAravapAra vAridhiyoLu muNugide nAnu
nAri sutaru tannavaraendu bhrAntiyali biddu nondeno hariye

caraNam 2

vEda shAstrangaLu Odi vAdisi balu janma baLalide nAnu
Aru mUruti pAdavannu anusarisade lOka ranjitanAde

caraNam 3

Aru garvagaLu kUDi baride indriya tAnella nODi
tOride hari dAsanendu gAruDi mADi nA kAlava kaLede

caraNam 4

para sati para dravyagaLane para ninde para drOhagaLane mADideno
durita parvatavettideno sthiravAda tanuvendu maraNa jaredeno

caraNam 5

bandeno bahu janmadalli nondeno viSayada bAdhegaLalli
mundEnu gatiyenagilla tande nInallade purandara viTTala
***