Showing posts with label ಸಲಹು ಸಲಹು ಗುರುರಾಯನೆ ನನ್ನಾಲಸದೆ prasannavenkata. Show all posts
Showing posts with label ಸಲಹು ಸಲಹು ಗುರುರಾಯನೆ ನನ್ನಾಲಸದೆ prasannavenkata. Show all posts

Monday, 18 November 2019

ಸಲಹು ಸಲಹು ಗುರುರಾಯನೆ ನನ್ನಾಲಸದೆ ankita prasannavenkata

by ಪ್ರಸನ್ನವೆಂಕಟದಾಸರು
ಸಲಹು ಸಲಹು ಗುರುರಾಯನೆ ನನ್ನಾಲಸದೆ ಪಾವನ್ನಕಾಯನೆ ನಾನುಹಲವು ದಿವಸ ನಿನ್ನ ನಂಬಿರೆದ್ವಿಜಕುಲಮಣಿ ಜನಾರ್ದನಾಚಾರ್ಯನೆ ಪ.

ನಿನ್ನ ಶರಣು ಹೊಕ್ಕ ಭೃತ್ಯರು ತತ್ವಪೂರ್ಣರಾದರು ಪೂತರಾದರುನನ್ನ ಮನ್ನಿಸಲಾಗದೆ ದಾತನೆ ವಿದ್ಯೋನ್ನತ ವಿಶ್ವಕೆ ಪ್ರೀತನೆ 1

ಆ ಬಾಲ್ಯದೊಳು ರಘುಪತಿಪಾದಭಜನಾದರ ನಿನಗುಂಟುಕೋವಿದಈ ಮೇದಿನಿಯಲಿ ಸುಧಾಸುರಸದಬಹು ಸ್ವಾದವ ಬಲ್ಲ ಇಷ್ಟಾರ್ಥದ 2

ಅಜ್ಞಾನ ಕತ್ತಲೆ ಕವಿದಿದೆ ಅಭಿಜÕನ ಮಾಡಲಿ ಬಾರದೆ ನಿನ್ನಪ್ರಜÕತನದ ಪ್ರಸವನಿತ್ಯಆಜ್ಞಾಧಾರಕಗೀಯೊ ಜ್ಞಾನವ 3

ಭಕ್ತಿ ವೈರಾಗ್ಯ ಸುಜ್ಞಾನ ಸಂಯುಕ್ತ ಮಂಗಳ ಗುಣಾಲಂಕೃತಯುಕ್ತಿ ಸಾಲದು ಹರಿಸೇವೆಗೆ ಸ್ವಪ್ನವ್ಯಕ್ತ ಬೋಧಿಸೆನಗೆ 4

ತಂದೆ ತಾಯಿ ಆಪ್ತಮಿತ್ರ ನೀಗತಿಹೊಂದಿಪ ದುರಿತಘಹರ್ತ ನೀ ಗೋವಿಂದ ಪ್ರಸನ್ವೆಂಕಟೇಶನ ಹೃದಯಮಂದಿರದೊಳು ಪೂಜಾಶೀಲನೆ 5
*******