Showing posts with label ಳಳ- RSS- ರಕ್ಷಾ ಬಂಧನ ರಕ್ಷೆಯ others RAKSHA BANDHANA RAKSHEYA rss. Show all posts
Showing posts with label ಳಳ- RSS- ರಕ್ಷಾ ಬಂಧನ ರಕ್ಷೆಯ others RAKSHA BANDHANA RAKSHEYA rss. Show all posts

Friday, 24 December 2021

ರಕ್ಷಾ ಬಂಧನ ರಕ್ಷೆಯ others RAKSHA BANDHANA RAKSHEYA rss

   


RSS song .

ರಕ್ಷಾಬಂಧನ ರಕ್ಷೆಯ ದ್ಯೋತಕ ನಮ್ಮ ನಾಡಿನಾಗ

ತನು ಮನ ಧನದಿ ರಕ್ಷಣೆಯಾಗಲಿ ಹಿಂದು ಭೂಮಿಯೀಗ ||ಪ||


ಹಿಂದು ಭೂಮಿಯ ಮಕ್ಕಳೆಲ್ಲರು ಸೇರಿ ಸಂಘದಾಗ

ರಕ್ಷೆಯ ನೂಲನು ಕಟ್ಟುತ ನಲಿವರು ಸ್ನೇಹ ಜೇನಿನ್ಹಾಂಗ

ಒಂದೇ ನಾಡಿನ ಮಕ್ಕಳು ನಾವು ಭಾವನೆ ಮನದಾಗ ||೧||


ಹಿಂದು ಭೂಮಿಯ ರಕ್ಷಣೆಗೈಯುವ ಶಪಥ ಹೃದಯದಾಗ

ತ್ಯಾಗ ಪ್ರೇಮಗಳ ಸ್ಫೂರ್ತಿಯ ಸೆಲೆಯಿದು ಬಂಧು ಬಳಗದಾಗ

ಅಣ್ಣ ತಂಗಿಯರ ಪ್ರೇಮದ ಸ್ಪಂದನ ನೂಲಿನ ಎಳೆಯಾಗ ||೨||


ಅಣ್ಣನ ಬರುವಿಕೆ ಕಾಯುತ ಕೂಡ್ರುವ ತಂಗಿಯ ಅನುರಾಗ

ರಾಖಿಯ ಕಟ್ಟುತ ಅಣ್ಣನ ಕಾಯುವ ಮಿಲನ ಏನು ಸೊಬಗ

ನಾಡಿನ ಸಂಸ್ಕೃತಿ ಭವ್ಯ ಪರಂಪರೆ ಅಡಗಿದೆ ಇದರಾಗ ||೩||


ಭರತ ಖಂಡದ ಜನಮನ ತಣಿದಿದೆ ಇಂದು ದಾರದಾಗ

ಭಾಷ ಭೇದವ ಪಂಥ ಪಂಗಡವ ಮರೆತು ದೇಶದಾಗ

ಸಿಖ್ಖ ಮರಾಠ ಕನ್ನಡ ಕೇರಳ ಭೇದ ಮರೆಯಿರೀಗ ||೪||

***

rakShAbaMdhana rakSheya dyOtaka namma nADinAga

tanu mana dhanadi rakShaNeyAgali hiMdu BUmiyIga ||pa||


hiMdu BUmiya makkaLellaru sEri saMGadAga

rakSheya nUlanu kaTTuta nalivaru snEha jEninhAMga

oMdE nADina makkaLu nAvu BAvane manadAga ||1||


hiMdu BUmiya rakShaNegaiyuva Sapatha hRudayadAga

tyAga prEmagaLa sphUrtiya seleyidu baMdhu baLagadAga

aNNa taMgiyara prEmada spaMdana nUlina eLeyAga ||2||


aNNana baruvike kAyuta kUDruva taMgiya anurAga

rAKiya kaTTuta aNNana kAyuva milana Enu sobaga

nADina saMskRuti Bavya paraMpare aDagide idarAga ||3||


Barata KaMDada janamana taNidide iMdu dAradAga

BASha BEdava paMtha paMgaDava maretu dESadAga

siKKa marATha kannaDa kEraLa BEda mareyirIga ||4||

***