Showing posts with label ಹುಟ್ಟಿದ್ದು ಫಲವೇನು ಮನುಜನು ಮುಟ್ಟದೆ ಗುರುಪದವನು gurumahipati. Show all posts
Showing posts with label ಹುಟ್ಟಿದ್ದು ಫಲವೇನು ಮನುಜನು ಮುಟ್ಟದೆ ಗುರುಪದವನು gurumahipati. Show all posts

Wednesday 1 September 2021

ಹುಟ್ಟಿದ್ದು ಫಲವೇನು ಮನುಜನು ಮುಟ್ಟದೆ ಗುರುಪದವನು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹುಟ್ಟಿದ್ದು ಫಲವೇನು ಮನುಜನು | ಮುಟ್ಟದೆ ಗುರುಪದವನು ಪ 


ಬೀರಿ ವಾಗ್ಜಾಲ ಆರಿಗೆ ಸೋಲಾ | ಮೆರೆದನು ಬಹಳ ಮರೆದ ಸ್ಮರಣ ಕೀಲಾ 1 

ಪರರುಪಕಾರಾ ಬಾರದಾ ಶರೀರಾ | ಸಿರಿಗಂಧ ಸಾರಾ ಧರಿಸಿದರೇನು ಪೂರಾ 2 

ಹವಣಿಸಿಗಾಢಾ ಶ್ರವಣವ ಮಾಡಾ | ಕುಂಡಲ ನೋಡಾ 3 

ತನ್ನ ತಾ ಮರೆವಾ ಅನ್ಯರಾ ಜರಿವ | ಮನ್ನಣೆ ತೋರುವಾ ಕನ್ನಿಯ ಪರಿಲಿರುವಾ 4 

ನಂದನ ಪ್ರಾಣಾ ತಂದೆ ಮಹಿಪತಿ ಜನಾ | ಹೊಂದನು ಚರಣಾ ಮಂದಗಾಣದ ಕೋಣಾ 5

***