Showing posts with label ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ vijaya vittala. Show all posts
Showing posts with label ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ vijaya vittala. Show all posts

Wednesday, 16 October 2019

ಪಾಲಿಸೆನ್ನನು ದೇವಾ ಪರಮ ಪುರುಷಾ ಶ್ವೇತ ವರಹಾ ankita vijaya vittala

ವಿಜಯದಾಸ
ಪಾಲಿಸೆನ್ನನು ದೇವಾ ಪರಮ ಪುರುಷಾ
ಶ್ವೇತ ವರಹಾ ಪ

ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು
ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ
ಜಯಜಯದೇವನಾಶ್ರಯ ಕಾಮಧೇನು ನೀ
ದಯಮಾಡಿ ನೋಡುವದು ದಾಸ ನೆನೆಸುವದು 1

ಪರಾಕು ಬೊಮ್ಮಾಂಡವನು
ಹೊತ್ತು ನಸುನಗು ನಾಗಾರಿಗಮನಾ
ಮಣಿ ಮಯದಾಭರಣದಿಂದೆಸೆವ ದೇ
ವೋತ್ತಮನೆ ದಾನವರ ಬಲವಳಿದಾ ಧೈರ್ಯ 2

ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು
ಪ್ರತ್ಯಕ್ಷವಾಗಿ ವರಗಳನೀವುತ
ಸಿರಿ ವಿಜಯವಿಠ್ಠಲ ವರಹ
ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ3
*********