..
by ಗುರುಪ್ರಾಣೇಶ ವಿಠಲ
ಶ್ರೀ ಸತ್ಯಪರಾಯಣ ಸ್ವಾಮಿಗಳ ಸ್ತುತಿ
ಕಂಗಳು ದಣಿಯ ನೋಡೆಲೆ ಮನವೆ |ಮಂಗಳಾಂಗ ಸತ್ಯಪರಾಯಣ ಗುರುಗಳ ಪ
ಹಿಂದಿನ ಜನುಮದಿಂದ | ಬಂದ ಪಾಪಂಗಳ ||ಇಂದು ತಮ್ಮ ದರುಶನ | ದಿಂದ ಕಳದಾ 1
ನಂದತೀರ್ಥ ಶಾಸ್ತ್ರ | ಸಿಂಧುವಿಗೆ ಪೂರ್ಣ ಚಂದ್ರಾ |ನಂದದಲೊಪ್ಪುವ ಗುಣ | ಸಾಂದ್ರರ ಪದಂಗಳ 2
ವರಸೀತಾರಾಮ ಪದ | ಸರಸಿಜಕೆ ಮಧುಪಾ ||ಗುರುಪ್ರಾಣೇಶ ವಿಠಲಾ ನಿರಸಿಹ ಹೃದಯದಿ 3
****