ಅನ್ನವನುಣಿಸಿದ ರತಿ ಹರುಷದಿಂದನಂದಗೋಪನ ಕಂದನಿಗೆ ಪ
ವೃಂದಾವನದಲ್ಲಿ ನಲಿನಲಿದಾಡಿದಗೋಪಿಯ ಕಂದನಿಗೆಮಂದರೋದ್ಧರ ಅರವಿಂದ ಮೂರುತಿಗೆಇಂದಿರೆ ಅರಸ ಶ್ರೀಹರಿ ಗೋವಿಂದನಿಗೆ1
ಪಂಚಭಕ್ಷ್ಯವೆ ಪರಮಾನ್ನ ಶಾಲ್ಯಾನ್ನವೆಚಿತ್ರಾನ್ನಗಳ ಬಡಿಸಿಚಂಚಲಾಕ್ಷಿಯರು ಚಿನ್ನದ ತಟ್ಟೇಲಿಕಂಜಲೋಚನ ಕೃಷ್ಣಗಾರತಿ ಬೆಳಗುತ್ತ 2
ದಧಿಘೃತಬಾಂಡವನೊಡೆದು ಬ್ರಹ್ಮಾಂಡಬಾಯಲಿ ತೋರಿದ ಹರಿಗೆಹದಿನಾರು ಸಾವಿರ ಗೋಪೇರನೊಡಗೂಡಿಕೊಳಲನೂದುವ ಹಯವದನ ಮೂರುತಿಗೆ 3
***
pallavi
annavanuNisidarati haruSadinda nandagOpana kandanige
caraNam 1
vrundAvanadalli nalinalidADida gOpiya kandanige
mandarOddhara aravinda mUrutige indire arasa shrI hari gOvindanige
caraNam 2
panca bhakSyave paramAnna shAlyAnnave citrAnnagaLa baDisi
cancalAkSiyaru cinnada taTTEli kanjalOcana kruSNagArati beLagutta
caraNam 3
dadhigruta bhANDavanoDedu brahmANDa bAyali tOrida harige
hadinAru sAvira gOpEranoDagUDi koLalanUduva hayavadana mUrutige
***