Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ರಾಗ – : ತಾಳ –
ನಾರಸಿಂಹ ನಾರಸಿಂಹ ನಾರಸಿಂಹ ll ಪ ll
ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ
ಕೃತ್ತಿ ಒತ್ತಿ ಪರಿಹರಿಸಿ
ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ
ಭಕ್ತವತ್ಸಲ ನಾರಸಿಂಹ ll 1 ll
ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ
ನಿಂದು ನಾ ನಿನ್ನ ಬೇಡೆ
ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ
ಮಂದೀಗೆ ಕುಂದು ಮಾಡಬ್ಯಾಡೆಂದೆ ll 2 ll
ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ
ನೊಂದ ಪರಿ ಪೇಳಲಾರೆ
ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ
ತಂದೆ ಈ ಸುತನಕಾಯೋ ll 3 ll
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ
ಎಂದು ಎನ್ನನಗಲದೆ
ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು
ವಂದಿಸುವೆನು ನಾರಸಿಂಹ ll 4 ll
ಮುಂದಾದರು ಹೃನ್ಮಂದಿರದಿ ನೆಲೆಗೊಂಡು l
ಸಂದರ್ಶನವೀಯೋ ದೇವ
ಕಂದರ್ಪಹರ ವಿಜಯರಾಮಚಂದ್ರವಿಟ್ಟಲರೇಯ
ವಂದೆ ಭಕ್ತಿಯ ಪಾಲಿಸೊ ll 5 ll
***
ನಾರಸಿಂಹ ನಾರಸಿಂಹ ನಾರಸಿಂಹ ಪ
ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ
ಕೃತ್ತಿ ಒತ್ತಿ ಪರಿಹರಿಸಿ
ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ
ಭಕ್ತವತ್ಸಲ ನಾರಸಿಂಹ 1
ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ
ನಿಂದು ನಾ ನಿನ್ನ ಬೇಡೆ
ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ
ಮಂದೀಗೆ ಕುಂದು ಮಾಡಬ್ಯಾಡೆಂದೆ 2
ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ
ನೊಂದ ಪರಿ ಪೇಳಲಾರೆ
ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ
ತಂದೆ ಈ ಸುತನ ಕಾಯೋ 3
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ
ಎಂದು ಎನ್ನಗಲದೆ
ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು
ವಂದಿಸುವೆನು ನಾರಸಿಂಹ 4
ಮುಂದಾದರು ಹೃನ್ಮಂದಿರದಿ ನೆಲೆಗೊಂಡು
ಸಂದರ್ಶನವನೀಯೊ ದೇವ
ಕಂದರ್ಪಹರ ವಿಜಯ ರಾಮಚಂದ್ರವಿಠಲರೇಯ
ವಂದೆ ಭಕ್ತಿಯ ಪಾಲಿಸು 5
***