Showing posts with label ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ purandara vittala. Show all posts
Showing posts with label ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ purandara vittala. Show all posts

Friday, 6 December 2019

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ ಸೇರಿ ಇರುವರೇ purandara vittala

ಹೆಣ್ಣು ಕೊಟ್ಟತ್ತೆಮಾವಂದಿರ ಮನೆಯಲ್ಲಿ 
ಸೇರಿ ಇರುವರೇ ಎಲೆ ಮನುಜ ||ಪ||

ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು
ಅಂದಿನ ಮರುದಿನ ಬಂದ ಸ್ನೇಹಿತರನ್ನ ಕಂಡಂತೆ ಕಾಣೂವರೊ
ಬಂದ ಮೂರಲ್ಲಿ ಪರದೇಶಿಯ ಕಂಡಂತೆ ಸಡ್ಡೆ ಮಾಡದೆ ಇಹರೊ
ಮುದದಿಂದ ನಾಲ್ಕು ದಿವಸವು ಇದ್ದರೆ ಮಾನಭಂಗವ ಮಾಡಿ ಮಾತಾಡುವರೊ ||

ಐದನೆ ದಿನ ಆಕಳು ಬರಲಿಲ್ಲ ಅರಸಿ ತರಬೇಕೆಂಬರೊ
ಇಂದೆಮ್ಮಗೆ ಕಲಗಚ್ಚನಿಕ್ಕದೆ ಎಲ್ಲಿ ಹೋದರೆಂಬೋರೊ
ಬೀದಿಯಲ್ಲಿ ಕಸ ಬೆಟ್ಟದಂತೆ ಬಿದ್ದಿದೆ ಭೇದವೆ ನಿಮಗೆಂಬೋರೊ
.....।।

ಷಷ್ಠಿಯ ದಿನದಲ್ಲಿ ಅಟ್ಟಡಿಗೆಯೆಲ್ಲ ಆರಿಹೋಯಿತು ನಿಮಗೆ ಆಳುವೆ ಎಂತೆಂಬೋರೊ
ಎಷ್ಟೆಂತ ನಿಮ್ಮ ಛಾನಸ ಏಳಬಾರದೆಂಬೋರೋ
ಅಷ್ಟಮ ಶನಿಯಿದು ಮನೆ ಬಿಟ್ಟು ಹೋಗದು ನಮಗೆ ಅಳವಿಲ್ಲ ಎಂತಂಬೋರೊ
ಇಷ್ಟು ಬಿಟ್ಟು ಶ್ರೀಪುರಂದರವಿಠಲನ ಇಹಪರವೆರಸಿಕೊಳ್ಳೊ ಮನುಜ ||
*********