'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865-1950
ಸಂಪ್ರದಾಯ
ಆರುತೀಯಾ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ಪ
ನಾರಿಮಣಿಯರೆಲ್ಲ ಕೂಡೀ | ತಾರೆ ಮುಕ್ತಿನಾರುತೀಯಾ ಅ.ಪ
ರಕ್ಕಸಾಂತಕ ದೇವನೀಗೆ | ಸಕ್ಕುಬಾಯಿ ವರದನಿಗೇ
ಲಕ್ಕೂಮೀಯ ಪ್ರೀಯನೀಗೆ | ಮಂಗಳಾ ಜಯಮಂಗಳಾ 1
ನಾರಸಿಂಹಾ ವಿಠಲನೀಗೆ | ಚಾರುಮಹಿಮಾತೋರಿದವಗೇ
ನಾರೆಯರು ಹರುಷದಿಂದಾ | ತಾರೆ ಮುತ್ತಿನಾರುತೀಯಾ 2
***