Tuesday, 3 August 2021

ಆರುತಿಯ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865-1950 


ಸಂಪ್ರದಾಯ


ಆರುತೀಯಾ ಬೆಳಗೆ ಬೇಗಾ ಸಾರಸಾಕ್ಷ ದೇವನೀಗೆ ಪ


ನಾರಿಮಣಿಯರೆಲ್ಲ ಕೂಡೀ | ತಾರೆ ಮುಕ್ತಿನಾರುತೀಯಾ ಅ.ಪ


ರಕ್ಕಸಾಂತಕ ದೇವನೀಗೆ | ಸಕ್ಕುಬಾಯಿ ವರದನಿಗೇ

ಲಕ್ಕೂಮೀಯ ಪ್ರೀಯನೀಗೆ | ಮಂಗಳಾ ಜಯಮಂಗಳಾ 1


ನಾರಸಿಂಹಾ ವಿಠಲನೀಗೆ | ಚಾರುಮಹಿಮಾತೋರಿದವಗೇ

ನಾರೆಯರು ಹರುಷದಿಂದಾ | ತಾರೆ ಮುತ್ತಿನಾರುತೀಯಾ 2

***


 

No comments:

Post a Comment