>>
ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ
ಕುಲವೆ ಉದ್ಧಾರವಾಗುವ ಕಾಲವೊ ಪ
ಕೊಲೆ ಅನೃತ ಕಳವು(ದಶಬಾರ ಪಟ್ಟಾರ) [?]
ಸಲೆ ಬಯಸಿ ಸರ್ವರಲಿ ನೆನೆವುತಿದ್ದೆ
ಒಲಿದು ವೈಕುಂಠಪತಿ ಒಮ್ಮೆ ನೆನೆದರೆ ಮನಕೆ
ಬಲು ಹರುಷವಾಗುವ ಭಾಗ್ಯವೆಲ್ಯೊದಗಿತೊ 1
ಸತ್ಕರ್ಮಗಳ ಲೇಶ ಸ್ವಪ್ನದಲಿ ತಿಳಿಯದು
ಮತ್ತತನದಲಿ ನಡೆದ ಮೂರ್ಖನಿಗೆ
ಎತ್ತಲಿಂದೊದಗಿತೊ ಎನಗೆ ತಿಳಿಯದು ದೇವ
ಉತ್ತಮನ ನೆನೆನೆನೆದು ಉಬ್ಬೇರುತಿಹದೊ 2
ಬಂದ ಕಾರ್ಯವ ಬಿಟ್ಟು ಮಂದಮತಿತನದಿಂದ
ಬೆಂದ ದುರ್ವಿಷಯದಲಿ ಬಳಲುತಿದ್ದೆ
ತಂದೆ ಕದರುಂಡಲುಗಿ ಹನುಮಯ್ಯನಾ ಪಾದ
ಹೊಂದಿದಾ ನೆವದಿಂದ ಹೊಸ ಪರಿಯ ಕಂಡೆ 3
****
No comments:
Post a Comment