Tuesday, 3 August 2021

ಸಂಸಾರವೆಂಬ ಸರ್ಪದ ಬಾಧೆಯನ್ನು ಕಂಸಾರಿ ಕೇಳು ankita kadarundalagihanumaiah

ಸಂಸಾರವೆಂಬ ಸರ್ಪದ ಬಾಧೆಯನ್ನು

ಕಂಸಾರಿ ಕೇಳು ಸೈರಿಸಲಾರೆ ಇನ್ನು ಪ


ಕಚ್ಚಿ ಬಹುಕಾಲ ಕಡಿಮ್ಯಾಗಲೊಲ್ಲದು

ಹೆಚ್ಚುತಲೆ ವೋಗುತಿದೆ ಪೇಳಲೇನು

ಅಚ್ಯುತನೆ ನಿಮ್ಮ ನಾಮ ಮಂತ್ರದೌಷಧಿಯನ್ನು

ಮುಚ್ಚಿ ಕೊಡುಯೆಂದು ಮನದಲ್ಲಿ ನಿಂದು 1


ಮತ್ತೆ ಮಹಾಪಾಪವೆಂಬ ವಿಷ ತಲೆಗೇರಿ

ತತ್ತರಿಸಿ ಕಳವಳಗೊಳಿಸುತಲಿದೆ

ಉತ್ತಮರಾ e್ಞÁನವೆಂಬುತ್ತಾರವನೆ ಕೊಟ್ಟು

ಹತ್ತುನೂರು ನಾಮದೊಡೆಯ ಹರಿಯೆ ಸಲಹೆನ್ನ 2


ಬೆಂದ ದುರ್ವಿಷಯಗಳು ಹಂದಿನಾಯ್ಗಳಿಗುಂಟು

ಎಂದು ದೊರೆವುದೋ ದ್ವಿಜಾಗ್ರಕುಲವು

ಎಂದಾದರೂ ಒಮ್ಮೆ ಬಯಸುವಂತಿ ಭಕುತಿ ಕೊಡು

ತಂದೆ ಕದರುಂಡಲಗಿ ಹನುಮಯ್ಯನೊಡೆಯಾ 3

****


No comments:

Post a Comment