Showing posts with label ಕಾಮಿತಪ್ರದ ರಘು abhinava pranesha vittala ankita suladi ರುದ್ರದೇವ ಸುಳಾದಿ KAAMITAPRADA RAGHU RUDRADEVA SULADI. Show all posts
Showing posts with label ಕಾಮಿತಪ್ರದ ರಘು abhinava pranesha vittala ankita suladi ರುದ್ರದೇವ ಸುಳಾದಿ KAAMITAPRADA RAGHU RUDRADEVA SULADI. Show all posts

Tuesday, 8 December 2020

ಕಾಮಿತಪ್ರದ ರಘು abhinava pranesha vittala ankita suladi ರುದ್ರದೇವ ಸುಳಾದಿ KAAMITAPRADA RAGHU RUDRADEVA SULADI

 

Audio by Vidwan Sumukh Moudgalya

ಶ್ರೀ ಅಭಿನವ ಪ್ರಾಣೇಶವಿಠಲದಾಸಾರ್ಯ ವಿರಚಿತ  ಶ್ರೀ ರುದ್ರದೇವರ ಸುಳಾದಿ 


 ರಾಗ : ನಾಟ 


 ಧೃವತಾಳ 


ಕಾಮಿತಪ್ರದ ರಘು ರಾಮ ಚಂದ್ರನ ಪಾದ

ತಾಮರಸಾಳಿ ಶಿಖಿ ಸೋಮಾರ್ಕ ನಯನನೆ

ಭೀಮ ವಿಕ್ರಮ ಸುತ್ರಾಮಾದಿ ಸುರವಂದ್ಯ

ವ್ಯೋಮಕೇಶನೆ ಭವ ವಾಮ ದೇವ

ಭೂಮಿಜ ವೈರಿ ಸಖ ಭೂಮಿರಥನೆ ನಿನ್ನ 

ನಾಮ ಸುಧೆಯನುಣಿಸು ಕಾಮಾರಿಯೆ

 ರಾಮಾ ನಾಮಾಭಿನವ ಪ್ರಾಣೇಶ ವಿಠಲನ 

ಯಾಮ ಯಾಮಕೆ ಭಜಿಸಲಾ ಮನ ಪ್ರೇರಿಸು ॥೧॥


 ಮಟ್ಟತಾಳ 


ಅದ್ರಿಕುವರಿಲೋಲ ಕ್ಷುದ್ರದಿತಿಜಕಾಲ

ನಿದ್ರ ರಹಿತ ಖ್ಯಾತ ಭದ್ರ ಭಕುತಿದಾತ

ಅದ್ರಿ ರಜತವಾಸ ಕದ್ರು ವೇಯಾ ಭೂಷಾ

ಭದ್ರ ಮೂರ್ತ್ಯಾಭಿನವ ಪ್ರಾಣೇಶವಿಠಲನ 

ಅದ್ರಿ ಭಕುತಿಯ ನೀಡು ಮಾದ್ರಿಜಾಗ್ರಜ ಗುರುವೇ॥೨॥


 ತ್ರಿವಿಡಿತಾಳ 


ಗಜಮುಖ ಜನಕನೆ ಕುಜನ ಕುಠಾರನೆ

ಅಜ ಸುತ ಬಲ ಸಾಮಜ ಮರ್ದನ

ಅಜಿನಾಂಬರ ಧರ ಸುಜನ ಮನ ಮಂದಿರ

ವಿಜಯ ಸನ್ನುತ ಪಾದಾಂಬುಜ ಶಂಭುಶಂಕರ

 ತ್ರಿಜಗಪಾಲಾಭಿನವ ಪ್ರಾಣೇಶವಿಠಲನ 

ಭಜನೆ ಪಾಲಿಸು ಜೀಯಾ ಸುಜನಗಣಗೇಯ ॥೩॥


 ಅಟ್ಟತಾಳ 


ಆರುಮೊಗನ ಪೆತ್ತ ಚಾರು ಚರಿತ್ರನೆ

ಮೂರಧಿಕ ಶಾರೀರ ವರ್ಣನೆ

ಧಾರುಣಿಯೊಳು ಲಿಂಗಾಕಾರದಿ ಪೂಜ್ಯನೆ

ಘೋರ ನಿಸ್ಸಾರ ಸಂಸಾರದೊಳಗೆ ಬಿದ್ದು 

ಆರೆಂಟು ಅರಿಗಳ ಮೀರಿದೆ ಉಪಟಳ

ಆರಲಾರೆನು ದೇವಾ ಪಾರುಗಾಣಿಸು ಭವ 

ಮಾರ ಶರವ ಹರಿ ಮಾರದೇವನ ವೈರಿ

 ಈರ ಪಿತನಭಿನವ ಪ್ರಾಣೇಶ ವಿಠಲನ 

ಚಾರು ದಾಸ್ಯವನೀಯೋ ಶಿವ ಮಹಾದೇವ ॥೪॥


 ಆದಿತಾಳ 


ನಿಟಿಲನಯನ ಸುರ ಕಟಕಾದ್ಯಪನೆ

ಕುಟಿಲವ ಬಿಡಿಸಯ್ಯ ಪಟುತರ ದೇವನೆ

ಖಟವಪಾಣಿ ಧೂರ್ಜಟಿ ಮೃಗಲಾಂಛನ

 ಕಠಿಣ ಭವಾಂಬುಧಿ ಘಟಜ ಭಕ್ತಾಮಯ 

ಅಟವಿ ಧನಂಜಯ ಸ್ಫಟಿಕ ಸನ್ನಿಭಕಾಯ 

 ಚಟುಲಭಿನವ ಪ್ರಾಣೇಶವಿಠಲನೆ ಧ್ಯಾನ

ಘಟಕ ಘಟಕದಲ್ಲಿ ಘಟನೆ ಮಾಡಿಸೋ ಶಿವನೇ ॥೫॥


 ಜತೆ 


ಮನದೊಡೆಯನೆ ಎನ್ಮನ ಚಂಚಲವ ಕಳೆ

ಘನ ನಿಭ ಅಭಿನವ ಪ್ರಾಣೇಶ ವಿಠಲನ ಸಖನೆ ॥೬॥

*****