Showing posts with label ಬಂದು ನೆಲೆಸಿಹ ನೋಡಿ ಶ್ರೀ ರಾಘವೆಂದ್ರನು lakumeesha. Show all posts
Showing posts with label ಬಂದು ನೆಲೆಸಿಹ ನೋಡಿ ಶ್ರೀ ರಾಘವೆಂದ್ರನು lakumeesha. Show all posts

Wednesday, 1 September 2021

ಬಂದು ನೆಲೆಸಿಹ ನೋಡಿ ಶ್ರೀ ರಾಘವೆಂದ್ರನು ankita lakumeesha

 ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು

ಅಂಕಿತ : ಶ್ರೀ ಲಕುಮೀಶ
ರಾಗ : ಹಂಸಾನಂದಿ  ತಾಳ : ಆದಿ

ಬಂದು ನೆಲೆಸಿಹ ನೋಡಿ 
ಶ್ರೀ ರಾಘವೆಂದ್ರನು ।। ಪಲ್ಲವಿ ।।
ಅಂದು ಭೂಮಿಯ 
ಕದ್ದ ದೈತ್ಯನ ।
ಕೊಂದ ವರಹ ಗೋವಿಂದನ 
ಛಂದದ । ಕೋರೆ ।
ಯಿಂದ ಜನಿಸಿದ ಸುಂದರ 
ತುಂಗಾ ನದಿಯ ತೀರದಿ ।। ಅ ಪ ।।
ಪ್ರಥಮ ಯುಗದೊಳು 
ಈತ ಜಾತ ರೂಪ ಕಶ್ಯಪ ।
ಜಾತ ನೆನಿಸಿ ಮೆರೆದಾತ 
ಮತಿಗೆಟ್ಟ ಪಿತನ ।
ಅತುಳ ಬಾಧೆಗಳ್ ಗೆದ್ದಾತ 
ಕೃತಿ ಪತಿಗೆ ಪ್ರೀತ ।।
ವೀತ ಹೋತ್ರನ 
ಪುತ್ರನ ಜನಕನ 
ಸತತ ನಲಿಯುತ 
ನಗುತ । ಭಜಿ ।
ಸುತ ರತುನ ಸ್ತಂಭದಿ 
ಪಿತಗೆ ನರಮೃಗ ।
ತತಿಯ ಪತಿಯನು 
ಜಿತದಿ ತೋರುತ ।। ಚರಣ ।।
ಬ್ರಹ್ಮನಯ್ಯ ಸರ್ವೇಶಾ 
ಎಂದರುಹಿದಾ । ಭಾವಿ ।
ಬ್ರಹ್ಮದೇವನ ಆವೇಶಾ 
ಯಿಂದ ಪುಟ್ಟಿ ಈ ।
ಬ್ರಹ್ಮಾಂಡದೊಳಗೆ 
ವ್ಯಾಸರಾಜ 
ಯತಿಯ ರವಿಭಾಸ ।।
ಬ್ರಹ್ಮಣ್ಯತೀರ್ಥರ ಕುವರ 
ನೆನಿಸುತ ಬ್ರಹ್ಮಜಾ೦ಶಗೆ 
ಗುರುವು ಎನಿಸುತ ।
ಬ್ರಹ್ಮ ತಾನೆಂಬ 
ಕುಮತಿಗಳ । ಮ ।
ನ ಹಮ್ಮು ಮುರಿಯುತ 
ದುಂದುಭಿ ಹೊಡೆಸುತ ।। ಚರಣ ।।
ನಾಗಾದ್ರೀಶನ ದಯದಿ 
ತಿಮ್ಮಣ್ಣಭಟ್ಟರ ।
ಮಗನೆನಿಸೀ ಜಗದಿ 
ವೇಂಕಟೇಶ ನಾಮದಿ ।
ನಿಗಮಾಗಮಗಳೋದಿ 
ವೀಣೆ ಗಾನ । ವಿದ್ಯಾದಿ ।।
ಮಿಗೆ ಪ್ರವೀಣನು ಯೆನಿಸೆ 
ಹರುಷದಿ ಸುಗುಣ ನಿಧಿ ।
ಶ್ರೀ ಗುರು ಸುಧೀಂದ್ರರು 
ರಾಘವೇಂದ್ರನೆಂದು 
ನಾಮ ನೀಡಲು ।
ನಗಧರ ಲಕುಮೀಶ 
ನೊಲಿಸುತ ।। ಚರಣ ।।
***