Showing posts with label ಸುಂದರ ಗುರು ರಾಘವೇಂದ್ರರೆಂತೆಂಬುವೋ guruindiresha SUNDARA GURU RAGHAVENDRARENTEMBUVO. Show all posts
Showing posts with label ಸುಂದರ ಗುರು ರಾಘವೇಂದ್ರರೆಂತೆಂಬುವೋ guruindiresha SUNDARA GURU RAGHAVENDRARENTEMBUVO. Show all posts

Thursday, 2 December 2021

ಸುಂದರ ಗುರು ರಾಘವೇಂದ್ರರೆಂತೆಂಬುವೋ ankita guruindiresha SUNDARA GURU RAGHAVENDRARENTEMBUVO



ಹರಪನ ಹಳ್ಳಿ ಶ್ರೀ ಕೃಷ್ಣಾಚಾರ್ಯರು

ಅಂಕಿತ: ಗುರು ಇಂದಿರೇಶ guruindiresharu


ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ


ಬಂಧ ಭಕ್ತರ ಅಘವೃಂದ ಕಳೆವೊ ಗುಣಸಾಂದ್ರ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ.


ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1


ಘೋರಾ ದುರಿತವೆಂಬೊ ವಾರುಧಿಯೊಳಗೀಸಲಾರೆನೋದಯ ಬಾರದೇನೋಪೋರನೆನ್ನದಲೆ ತಾತ್ಸಾರ ಮಾಡದಲೆ ದಡ ಸೇರಿಸೊಬಿನ್ನಪವ ವಿಚಾರಿಸೊ ಮನ್ನಿಸಿ ಮಾರ್ಗ ತೋರಿಸೊನಿನ್ನೊಳು ನಿರಂತರ ಪಾದ ಭಕ್ತಿಯ ದಾರಿಯನೆ ಹಿಡಿಸೊಕುರು ಪಾಪ ಸಂಚಯ ಕ್ರೂರ ಕುಜನರ ಕುಠಾರದಿಂದುಳಿಸೊಮನ್ಮಥದಭೀಷ್ಟೆಯ ಚಾರು ಸಲಿಸುವ ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2


ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3

***


pallavi


sundara guru rAghavEndrarentembO karmandigaLa rasanE vandisuvE


anupallavi


banda bhakutaraga vrunda kaLeva guNasAndra sannuta mahimarendu nA nambidE


caraNam 1


parama karuNi nija caraNa bhajakaranu ddharisutalanudina porevanendu

karavamugidu dvaradi paripari ninnAl pariyuvE dainyadi bAyi tereyuvE

karapiDiyendu kareyuvE ninnesari porevantha dhoregaLa kANE

madguravE ennanthA pAmara narana kAivadu ninage accariyE

vara yOgivaryanE niruta vrundAvanadi rAjisi mereva galamancarita

tavapada smaraNe santata nIDu mareyadE haruSadali nirjarara taruvE


caraNam 2


ghOra durita vembO vAridhiyoLagIsalArE ninidu dayabradEnO

pOranEnutali tAtsAra mADadE daDasErisO binnappava vicArisO sEriruva

kaDu kAmAdi gaLara bErugaLanaLisO ninnoLu nirantara sUri bhakutara

dAriyoLu nilisO uru pApa sancaya krUra kujanara kuTAra hinduLisO

manmada bhISTeya bhUri namisuvE cArukiTijA tIra nilayakE

sAridavaranu pArugANipEnendu sArutide yativIra salisO


caraNam 3


EsEsu janumati klEshakaLanubhavisi kAsi koLisi manapEsaratE

hEsi viSayangaLa lEsu tiLiyadE maremOsadi duSTara sahavAsati

carisatE mandahAsati santaisu ravisankAsha jana vitvAmsa sAtarati

kASAya vasanavi bhUSitAnganE vyAsamuniparati dIsha mukarikE dOSa

veratI samaya nutisuvE AsamIra matApti candra shrIsha guru indirEsha

nanghriya dAsa bhavabhaya rAshitaridu udAshisatE nI pOSisemmanu

***