ಪುರಂದರದಾಸರು
ರಾಗ ಮುಖಾರಿ ಝಂಪೆ ತಾಳ
ಆರೋಗಣೆಯ ಮಾಡೇಳಯ್ಯ ||ಪ||
ಸರಸಿಜ ಭವಾಂಡದೊಳ್ ಮೇರು ಮಂಟಪದಿ
ಸುರದಿನಕರಾದೀಪ್ತಾಜ್ಯೋತಿಶ್ಚಕ್ರಾ
ತರಣಿ ಮಂಡಲವ ಪೋಲುವ ರತುನದ ಹೊನ್ನ
ಹರಿವಾಣದಲಿ ದೇವಿ ಬಡಿಸಿದಳಯ್ಯ
ಅಲ್ಲ ಹೇರ್‍ಅಳೆ ಲಿಂಬೆ ಮೆಣಸು ಯಾಲಕ್ಕಿಕಾಯಿ
ನೆಲ್ಲಿಯಂಬಟೆ ಕಾಯಿ ಚೆಲುವ ಮಾಗಾಯಿ
ಬಿಲ್ವ ಮಂಗ್ರುಳಿ ಸೊಂಡೆ ಚೆಲುವ ಪಾಪಟೆಕಾಯಿ
ಎಲ್ಲಾ ಧರಾದೇವಿ ತಾ ಬಡಿಸಿದಳಯ್ಯ
ಹಪ್ಪಳ ಸೆಂಡಿಗೆ ವಿವಿಧ ಶಾಕಂಗಳು
ತುಪ್ಪ ಸಕ್ಕರೆ ಹಣ್ಣು ಫಲಗಳು
ಕರ್ಪೂರ ಕಸ್ತೂರಿ ಬೆರಸಿದ ರಸಾಯನವ
ಒಪ್ಪಿಸಿ ಶ್ರೀದೇವಿ ಬಡಿಸಿದಳಯ್ಯ
ಎಣ್ಣೋರಿಗತಿರಸ ಬೆಲ್ಲ ಮಂಡಿಗೆಯ
ಅನ್ನ ಪಾಲಿನ ಪರಮಾನ್ನಗಳು
ಸಣ್ಣ ಶಾವಿಗೆಯು ಶಾಲ್ಯಾನ್ನವನು ನಿಮಿಷದೊಳ್
ಬಣ್ಣಿಸಿ ದುರ್ಗಾದೇವಿ ಬಡಿಸಿದಳಯ್ಯ
ನೀ ನಿತ್ಯ ತೃಪ್ತನಹುದು ನಿನ್ನುದರದೊಳ್
ನಾನಾ ಜನರು ಬಂದು ಉಣ್ಣ ಬೇಕು
ಶ್ರೀನಾಥ ಗದುಗಿನ ವೀರನಾರಾಯಣ
ಅನಾಥ ಬಂಧುವೆ ಪುರಂದರ ವಿಠಲ
***
ರಾಗ ಮುಖಾರಿ ಝಂಪೆ ತಾಳ
ಆರೋಗಣೆಯ ಮಾಡೇಳಯ್ಯ ||ಪ||
ಸರಸಿಜ ಭವಾಂಡದೊಳ್ ಮೇರು ಮಂಟಪದಿ
ಸುರದಿನಕರಾದೀಪ್ತಾಜ್ಯೋತಿಶ್ಚಕ್ರಾ
ತರಣಿ ಮಂಡಲವ ಪೋಲುವ ರತುನದ ಹೊನ್ನ
ಹರಿವಾಣದಲಿ ದೇವಿ ಬಡಿಸಿದಳಯ್ಯ
ಅಲ್ಲ ಹೇರ್‍ಅಳೆ ಲಿಂಬೆ ಮೆಣಸು ಯಾಲಕ್ಕಿಕಾಯಿ
ನೆಲ್ಲಿಯಂಬಟೆ ಕಾಯಿ ಚೆಲುವ ಮಾಗಾಯಿ
ಬಿಲ್ವ ಮಂಗ್ರುಳಿ ಸೊಂಡೆ ಚೆಲುವ ಪಾಪಟೆಕಾಯಿ
ಎಲ್ಲಾ ಧರಾದೇವಿ ತಾ ಬಡಿಸಿದಳಯ್ಯ
ಹಪ್ಪಳ ಸೆಂಡಿಗೆ ವಿವಿಧ ಶಾಕಂಗಳು
ತುಪ್ಪ ಸಕ್ಕರೆ ಹಣ್ಣು ಫಲಗಳು
ಕರ್ಪೂರ ಕಸ್ತೂರಿ ಬೆರಸಿದ ರಸಾಯನವ
ಒಪ್ಪಿಸಿ ಶ್ರೀದೇವಿ ಬಡಿಸಿದಳಯ್ಯ
ಎಣ್ಣೋರಿಗತಿರಸ ಬೆಲ್ಲ ಮಂಡಿಗೆಯ
ಅನ್ನ ಪಾಲಿನ ಪರಮಾನ್ನಗಳು
ಸಣ್ಣ ಶಾವಿಗೆಯು ಶಾಲ್ಯಾನ್ನವನು ನಿಮಿಷದೊಳ್
ಬಣ್ಣಿಸಿ ದುರ್ಗಾದೇವಿ ಬಡಿಸಿದಳಯ್ಯ
ನೀ ನಿತ್ಯ ತೃಪ್ತನಹುದು ನಿನ್ನುದರದೊಳ್
ನಾನಾ ಜನರು ಬಂದು ಉಣ್ಣ ಬೇಕು
ಶ್ರೀನಾಥ ಗದುಗಿನ ವೀರನಾರಾಯಣ
ಅನಾಥ ಬಂಧುವೆ ಪುರಂದರ ವಿಠಲ
***
pallavi
ArOgaNeya mADELayya
caraNam 1
sarasija bhAvANDadoL mEru maNTapadi suradi nakarAdIptAjyOtish-cakrA
taraNi maNDalava pOluva ratunadA honna harivANadali dEvi baDisidaLayya
caraNam 2
alla hERaLe limbe meNasu yAlakki kAi nelliyambaTe kAyi celuva mAkAyi
bilva mungaruLi soNDe celuva pApaTE kAyi ellA dharAdEvi tA baDisidaLayya
caraNam 3
happaLa seNDige vividha shAkangaLu tuppa sakkare haNNu phalagaLu
karpUra kastUri berasida rasAyanava oppisi shrIdEvi baDisidaLayya
caraNam 4
eNNOrigatirasa bella maNDikeya anna pAlina paramAnnagaLu
saNNa shAvikeyu shAlyannavanu nimiSadoL baNNisi durgA dEvi baDisidaLayya
caraNam 5
nI nitya trptanahudu ninnudaradoL nAnA janaru bandu uNNa bEku
shrInAtha kadugina vIra nArAyaNa anAtha bandhuve purandara viTTala
***
ಆರೋಗಣೆಯ ಮಾಡೇಳಯ್ಯ
ಶ್ರೀಮನ್ನಾರಾಯಣಭೋಗ ಸ್ವೀಕರಿಸಯ್ಯಪ.
ಸರಸಿಜಭವಾಂಡದ ಮೇರು ಮಂಟಪದಿ ದಿನಕರಕರ ದೀಪ್ತ ಜ್ಯೋತಿಶ್ಚಕ್ರವು ||ತರಣಿ ಮಂಡಲ ಪೋಲುವ ರತುನದ ಹೊನ್ನಹರಿವಾಣದಲಿ ದೇವಿ ಬಿಡಿಸಿಹಳಯ್ಯ 1
ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2
ಹಪ್ಪಳ ಸಂಡಿಗೆ ವಿವಿಧ ಶಾಕಂಗಳುತುಪ್ಪ ಸಕ್ಕರೆ ಹಣ್ಣು-ಹಂಪಲವು ||ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3
ಎಣ್ಣೂರಿಗತಿರಸ ಚೆನ್ನಾದ ಮಂಡಿಗೆಅನ್ನಕ್ಷೀರಾನ್ನ ಪರಮಾನ್ನಗಳು ||ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4
ನೀ ನಿತ್ಯತೃಪ್ತನಹುದು ನಿನ್ನ ಉದರದೊಳುನಾನಾ ಜನರು ಬಂದು ಉಣ್ಣಬೇಕೋ ||ಶ್ರೀನಾಥ ಗದುಗಿನ ವೀರನಾರಾಯಣಅನಾಥ ಬಂಧು ಶ್ರೀ ಪುರಂದರವಿಠಲ 5
*********