Showing posts with label ಎಂದಿಗು ಕಾಂಬುವೆನೋ ಶ್ರೀನಿವಾಸ ಬಂಧನ ಬಿಡಿಸು ಶ್ರೀಶಾ ಇಂದಿರೇಶಾ kalimardhanakrishna. Show all posts
Showing posts with label ಎಂದಿಗು ಕಾಂಬುವೆನೋ ಶ್ರೀನಿವಾಸ ಬಂಧನ ಬಿಡಿಸು ಶ್ರೀಶಾ ಇಂದಿರೇಶಾ kalimardhanakrishna. Show all posts

Monday, 2 August 2021

ಎಂದಿಗು ಕಾಂಬುವೆನೋ ಶ್ರೀನಿವಾಸ ಬಂಧನ ಬಿಡಿಸು ಶ್ರೀಶಾ ಇಂದಿರೇಶಾ ankita kalimardhanakrishna

 ಎಂದಿಗು ಕಾಂಬುವೆನೋ ಶ್ರೀನಿವಾಸ

ಬಂಧನ ಬಿಡಿಸು ಶ್ರೀಶಾ ಇಂದಿರೇಶಾ ಪ.


ಇಂದು ಈ ಭವದಲ್ಲಿ ನೊಂದು ನೊಂದೆನೊ ದೇವಾ

ಗೋವಿಂದಾ ಪಾಲಿಸಬೇಕಯ್ಯಾ ಗೋಗಳರಾಯ ಅ.ಪ.


ಇಂದಿರೇಶನೆ ನಿನ್ನ ಒಂದಿನಾದಿ ನಾನು ದೈನ್ಯದಿ ಭಜಿಸದೆ

ಬ್ಯಾಸರದೇ ಮಂದಮತಿಯು ನಾನು

ಸುಂದರ ಮೂರುತಿ ನೀನು

ಯನ್ನ ಹೃದಯ ಮಂದಿರದಲ್ಲಿ ಸಂದರುಶನ ಕೊಡೊ ಇಲ್ಲಿ 1


ಸದೋಷಿಯು ನಾನು ದೋಷರಹಿತ ನೀನು

ಶೇಷಶಯನ ನಿಮ್ಮ ನಾಮವೇ ಭೂಷಣ

ಸ್ವರಮಣನೀ ನಿನ್ನ ಸ್ಮರಣೆಯಾ ಮಾಡದೆ

ಹಾಳು ಮಾತುಗಳಿಂದ ಹೊತ್ತುಗಳದೆ ಮುಕುಂದಾ 2


ಮತ್ಗ್ಯಾದ್ಯನಂತವತಾರ ನೀನು ತುಚ್ಛದೈತ್ಯಸ ಸಂಹಾರ

ಇಚ್ಛಾದಿಂದಲಿ ನೀನು ಸುರರಿಗಾಧಾರ

ಕಾಳಿಯಮರ್ದನ ಕೃಷ್ಣಧೀರ ಗಂಭೀರಾಸುತಸುಕುಮಾರಾ 3

****