Showing posts with label ಸತತ ಸದಮಲ ಪತಿತಪಾವನ ಅತೀತಗುಣತ್ರಯಾನಂದನ mahipati. Show all posts
Showing posts with label ಸತತ ಸದಮಲ ಪತಿತಪಾವನ ಅತೀತಗುಣತ್ರಯಾನಂದನ mahipati. Show all posts

Wednesday, 1 September 2021

ಸತತ ಸದಮಲ ಪತಿತಪಾವನ ಅತೀತಗುಣತ್ರಯಾನಂದನ ankita mahipati

ಸತತ ಸದಮಲ ಪತಿತಪಾವನ ಅತೀತಗುಣತ್ರಯಾನಂದನ ಶ್ರುತಿಗಗೋಚರ ಯತಿಜನಾಶ್ರಯ ಅತಿಶಯಾನಂದಾತ್ಮನ ಭಜಿಸು ಮನವೆ ಪ  


ಪವಿತ್ರಪ್ರಣವ ಸುವಿದ್ಯದಾಗರ ವ್ಯಕ್ತಗುಣ ಅವಿನಾಶನ ಘವಿಘವಿಸುವಾನಂದಮಯ ರವಿಕೋಟಿ ತೇಜಪ್ರಕಾಶನ ಭವರಹಿತ ಗೋವಿಂದ ಗುರುಪಾವನ ಪರುಮಪುರುಷನ ಭುವನತ್ರಯಲಿಹ್ಯ ಭಾವಭೋಕ್ತ ಸಾವಿರನಾಮ ಸರ್ವೇಶನ 1 

ಮೂಜಗದಿ ರಾಜಿಸುತಿಹ್ಯ ತೇಜೋಮಯ ಘನಸಾಂದ್ರನ ಅಜಸುರೇಂದ್ರ ಸುಪೂಜಿತನುದಿನ ರಾಜಮಹಾರಾಜೇಂದ್ರನ ಭಜಕ ಭಯಹರ ನಿಜ ಘನಾತ್ಮಗಜವರದ ಉಪೇಂದ್ರನ 2 

ಪರಾತ್ಪರ ಪರಿಪೂರ್ಣ ಪರಂಜ್ಯೋತಿ ಘನಸ್ವರೂಪನ ಪರಂಬ್ರಹ್ಮ ಪರೇಶ ಸುರವರನಾಥ ಗುರುಕುಲದೀಪನ ನಿರಾಳ ನಿರ್ವಿಶೇಷ ನಿರಾಕಾರ ನಿರ್ವಿಕಲ್ಪನ ಕರುಣದಿಂದಲಿ ಹೊರೆವ ಮಹಿಪತಿಸ್ವಾಮಿ ಚಿತ್ಸ ್ವರೂಪನ 3

***