Showing posts with label ತಂಗಿ ನೀ ಕೇಳಿದ್ಯಾ ರಾಘವೇಂದ್ರಾ gurupranesha vittala. Show all posts
Showing posts with label ತಂಗಿ ನೀ ಕೇಳಿದ್ಯಾ ರಾಘವೇಂದ್ರಾ gurupranesha vittala. Show all posts

Friday, 27 December 2019

ತಂಗಿ ನೀ ಕೇಳಿದ್ಯಾ ರಾಘವೇಂದ್ರಾ ankita gurupranesha vittala

ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ

ರಾಗ : ಹಂಸಾನಂದೀ   ತಾಳ : ಆದಿ
 
ತಂಗಿ ಕೇಳಿದ್ಯಾ ರಾಘವೇಂದ್ರಾ ।
ಘಂಗಳು ಕಳೆದುಸುಖಂಗಳ 
ಕೊಡುವದು ।। ಪಲ್ಲವಿ ।।

ಶ್ರೀ ಪೂರ್ಣಬೋಧರ । ಮ ।
ತಾಪಯೋಬ್ಧಿಗೆ ಚಂದ್ರ ।
ತಾಪಸೋತ್ತಮರ । ದಿ ।
ವ್ಯಾಪಾರ ಮಹಿಮೆಯ ।। ಚರಣ ।।

ಅಂಗ ಹೀನರಿಗೆ । ದಿ ।
ವ್ಯಾಂಗ ಕೊಟ್ಟರೆಂದು ।
ಸಂಗೀತ ಮುಖದಿ । ಜ ।
ನಂಗಳು ಪಾಡುವದು ।। ಚರಣ ।।
ಕಿವಿಯಿಲ್ಲದವರಿಗೆ ।
ತವಕಾದಿ ಕೊಟ್ಟರೆಂದು ।
ಸುವಿವೇಕ ಮನದಿಂದ ।
ಕವಿ ಜನ ಪಾಡುವದು ।। ಚರಣ ।।

ವಂಧ್ಯಾ ಸ್ತ್ರೀಯರು ।
ಬಂದು ನಿಂದು ಆರಾಧಿಸೆ ।
ಸಂದೇಹವಿಲ್ಲ ಬಹು ।
ಮಂದಿ ಮಕ್ಕಳ ಕೊಟ್ಟ ।। ಚರಣ ।।

ಗುರು ಪ್ರಾಣೇಶ ವಿಠಲಾ ।
ಸಾರುವ ಕಾಮಿತಾರ್ಥವಾ ।
ಗುರು ರಾಘವೇಂದ್ರರಲ್ಲಿ ।
ನಿರುತದಿ ಕೊಡಿಸುವ ।। ಚರಣ ।।
******

cತಂಗಿ ನೀ ಕೇಳಿದ್ಯಾ ರಾಘವೇಂದ್ರಾ-
ಘಂಗಳ ಕಳೆದು ಸುಖಂಗಳ ಕೊಡುವುದು
ತಂಗಿ ನೀ ಕೇಳಿದ್ಯಾ                || ಪ ||

ಶ್ರೀಪೂರ್ಣಭೋಧರ ಮತಪಯೋಬ್ಧಿಗೆ ಚಂದ್ರ
ತಾಪಸೋತ್ತಮರ ದಿವ್ಯಾಪಾರ ಮಹಿಮೆಯ        || ೧ ||

ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು
ಸಂಗೀತಮುಖದಿ ಜನಂಗಳು ಪಾಡುವುದು            || ೨ ||

ಕಿವಿಯಿಲ್ಲದವರಿಗೆ ತವಕದಿ ಕೊಟ್ಟರೆಂದು
ಸುವಿವೇಕ ಮನದಿಂದ ಕವಿಜನ ಪಾಡುವುದು        || ೩ ||

ಮಧ್ಯಸ್ತ್ರೀಯರು ಬಂದು ನಿಂದು ಆರಾಧಿಸೆ
ಸಂದೇಹವಿಲ್ಲ ಬಹುಮಂದಿಮಕ್ಕಳ ಕೊಟ್ಟ            || ೪ ||

ಗುರುಪ್ರಾಣೇಶವಿಠ್ಠಲ ಸರ್ವಕಾಮಿತಾರ್ಥವ
ಗುರುರಾಘವೇಂದ್ರರಲ್ಲಿ ನಿಂತು ನಿರುತದಿ ಕೊಡಿಸುವ        || ೫ ||
****

ಶ್ರೀ ರಾಘವೇಂದ್ರಸ್ವಾಮಿಗಳ ಸ್ತೋತ್ರ
ತಂಗಿನೀ ಕೇಳಿದ್ಯಾ ರಾಘವೇಂದ್ರಾ | ಘಂಗಳ ಕಳದು ಸುಖಂಗಳ ಕೊಡುವದು || ತಂಗಿ ನೀ ಕೇಳಿದ್ಯಾ ಪ
ಶ್ರೀ ಪೂರ್ಣಬೋಧರ ಮತಾಪಯೋಬ್ದಿಗೆ ಚಂದ್ರ |ತಾಪಸೋತ್ತಮರ ದಿವ್ಯಾಪಾರ ಮಹಿಮೆಯ 1
ಅಂಗಹೀನರಿಗೆ ದಿವ್ಯಾಂಗ ಕೊಟ್ಟರೆಂದು |ಸಂಗೀತ ಮುಖದಿ ಜನಂಗಳು ಪಾಡುವದು 2
ಕಿವಿಯಿಲ್ಲದವರಿಗೆ ತವಕಾದಿ ಕೊಟ್ಟರೆಂದು |ಸುವಿವೇಕ ಮನದಿಂದ ಕವಿಜನ ಪಾಡುವದು 3
ವಂಧ್ಯಾಸ್ತ್ರೀಯರು ಬಂದು ನಿಂದು ಆರಾಧಿಸೆ |ಸಂದೇಹವಿಲ್ಲ ಬಹು ಮಂದಿ ಮಕ್ಕಳ ಕೊಟ್ಟ 4
ಗುರು ಪ್ರಾಣೇಶ ವಿಠಲಾ ಸರುವ ಕಾಮಿತಾರ್ಥವಾ |ಗುರು ರಾಘವೇಂದ್ರರಲ್ಲಿ ನಿರುತದಿ ಕೊಡಿಸುವ 5
****