Showing posts with label ಮಂಗಳಮಾರಮಣಗೆ ಮಂಗಳ ಜಯ ಮಂಗಳ ಭೂರಮಣ purandara vittala. Show all posts
Showing posts with label ಮಂಗಳಮಾರಮಣಗೆ ಮಂಗಳ ಜಯ ಮಂಗಳ ಭೂರಮಣ purandara vittala. Show all posts

Friday, 6 December 2019

ಮಂಗಳಮಾರಮಣಗೆ ಮಂಗಳ ಜಯ ಮಂಗಳ ಭೂರಮಣ purandara vittala

ಪುರಂದರದಾಸರು
ರಾಗ ಸೌರಾಷ್ಟ್ರ. ಅಟ ತಾಳ

ಮಂಗಳ ಮಾರಮಣಗೆ ಮಂಗಳ ಭೂರಮಣಗೆ
ಜಯ ಮಂಗಳ ನಿತ್ಯ ಶುಭ ಮಂಗಳ ||

ಮುಕುಟಕ್ಕೆ ಮಂಗಳ ಮತ್ಸ್ಯಾವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮನಿಗೆ
ಸುಕಂಠಕ್ಕೆ ಮಂಗಳ ಸೂಕರರೂಪಕೆ
ನಖಕೆ ಮಂಗಳ ಮುದ್ದು ನರಸಿಂಹಗೆ ||

ವಕ್ಷಕ್ಕೆ ಮಂಗಳ ವಟುವಾಮನಗೆ
ಪಕ್ಷಕ್ಕೆ ಮಂಗಳ ಭಾರ್ಗವಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥ ರಾಮಗೆ
ಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ ||

ಉರುಗಳಿಗೆ ಮಂಗಳ ಉತ್ತಮ ಬೌದ್ಧಗೆ
ಚರಣಕ್ಕೆ ಮಂಗಳ ಕಲ್ಕ್ಯನಿಗೆ
ಪರಿಪರಿರೂಪಗೆ ಪರಮ ಮಂಗಳ ನಮ್ಮ
ಪುರಂದರ ವಿಠಲಗೆ ಶುಭ ಮಂಗಳ ||
********

ಮಂಗಳ ರಮಾರಮಣಗೆ ಮಂಗಳ 
ಜಯ ಮಂಗಳ ಭೂರಮಣಗೆ ಮಂಗಳ ಪ.

ಮುಕುಟಕೆ ಮಂಗಳ ಮತ್ಸ್ಯಾವಾತಾರಗೆಮುಖಕೆ ಮಂಗಳ ಮುದ್ದು ಕೂರ್ಮನಿಗೆ ||ಸುಕಂಠಕೆ ಮಂಗಳ ಸೂಕರರೂಪಗೆನಖಕೆ ಮಂಗಳ ಮುದ್ದು ನರಸಿಂಹಗೆ 1

ವಕ್ಷಕೆ ಮಂಗಳ ವಟವಾಮನನಿಗೆಪಕ್ಷಕೆ ಮಂಗಳ ಭಾರ್ಗವಗೆ ||ಕಕ್ಷಕೆ ಮಂಗಳ ಕಾಕುತ್ಸ್ಥರಾಮನಿಗೆಕುಕ್ಷಿಗೆ ಮಂಗಳ ಶ್ರೀ ಕೃಷ್ಣಗೆ 2

ಉರುಗಳಿಗೆ ಮಂಗಳ ಉತ್ತಮ ಬುದ್ಧಗೆಚರಣಕ್ಕೆ ಮಂಗಳ ಚೆಲ್ವ ಕಲ್ಕಿಗೆ ||ಪರಿಪರಿ ರೂಪಗೆಪರಮ ಮಂಗಳಪುರಂದರವಿಠಲಗೆ ಶುಭಮಂಗಳ 3
**********