ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ
ಮುನಿವರ್ಯ ಕಾಯಬೇಕೆನ್ನ ಮಧ್ವಮುನಿಕೃತ
ಗೃಂಥಾರ್ಥ e್ಞÁನ
ಕೊಟ್ಟು ಕನಸಿನೊಳಾದರು ವನಿತಾದಿ
ವಿಷಯವ ನೆನೆಸದಂದದಿ
ಮಾಡೋ ವನಜನಾಭನ ಪ್ರೀಯ ಅ.ಪ
ಮುನಿವರ್ಯ ಮನವಾಚಾಕಾಯಾ ದಿಂದ
ಅನುದಿನ ನಡೆಯುವ ಕ್ರಿಯಾ ಶ್ರೀ
ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು
ಯನಗೆಂದು ಮುಗಿವೆನು ಕೈಯಾ ಆಹಾ
ಮನಸಿಜನಯ್ಯನ ಗುಣಕಥನದಿ ಭವ ವನಧಿ
ದಾಟಿಸುವ ಸಜ್ಜನರ ಸಂಗವ ಕೊಡು 1
ಹಿಂದಕ್ಕೆ ನೀ ಮಾಡಿದಂಥ ತಪದಿಂದ
ಶ್ರೀಕಾಂತನಶ್ವತ್ಥ ರೂಪ
ದಿಂದ ಒಲಿದು ಬಂದು ನಿಂತು ಭಕ್ತ
ವೃಂದವ ಪಾಲಿಪ ನಿರುತ ಆಹ
ಇಂದುಮೌಲಿ ಮುಖರಿಂದ ಸಹಿತನಾಗಿ
ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ 2
ಪರಮಪಾವನ ಕೃಷ್ಣಾತೀರದಲ್ಲಿ ಮೆರೆವ
ಶ್ರೀ ಕಾರ್ಪರಾಗಾರ
ಬಹುಶರಣು ಜನರಿಗೆ ಮಂದಾರ
ನರಹರಿಯನೊಲಿಸಿದಂಥ ಧೀರಾ ಆಹಾ
ಕರುಣ ಶರಧೆಯನ್ನ ದುರಿತಗಳೋಡಿಸಿ
ಹರಿಗುರು ಚರಣದಿ ಪರಮಭಕ್ತಿಯ ಕೊಡೊ 3
****