..
ಕರ್ಮನಾಮಕ ಧರ್ಮಕಾರಿ ಪ
ನಿರ್ಮಮನ ಮಾಡೆನ್ನ ನಿರ್ಮಮರ ದೊರೆ ಹರಿಯೆ ಅ.ಪ
ಸೂರಿಗಳ ಹೃದಯಾಬ್ಜ ಸೂರ್ಯ ಸುಂದರಮೂರ್ತಿ
ನಾರಿಲಕ್ಷ್ಮೀ ವಕ್ಷ ಭೂರಿ ಕರುಣಿ
ಮೀರಿಹ ಅಹಂe್ಞÁನ ತಿಮಿರವನು ಪರಿಹರಿಸು
ಮಾರಮಣ ಮಾಂ ರಕ್ಷ ರಕ್ಷಿಸು ದಯವನಧಿ 1
ಬಂಧನದಿ ನೀನಿಡಲು ಅಜ ರುದ್ರ ಸುರರೆಲ್ಲ
ವಂದಿಸಲು ಬಧಿರರಂತಿರುವರಯ್ಯ
ಹಿಂದು ಮುಂದೆಂದೆಂದು ಎನ್ನಲ್ಲಿ ನೀ ಕುಣಿಸಿ
ದಂದದಲಿ ನಾ ಕುಣಿದೆ ಅರ್ಪಿತವಾಗಲಿ ನಿನಗೆ 2
ಮೋಚಕನೆ ಜಯೇಶವಿಠಲನೆ ವಿಧಿವಂದ್ಯ
ಯಾಚಿಪೆನು ವಿe್ಞÁನ ಕರುಣಿಸೆಂದು
ಊಚುನೀಚದಿ ನಿನ್ನ ಪೂರ್ಣ ಮೂರ್ತಿಯ ಮಹಿಮೆ
ಗೋಚರಕೆ ಬರುವಂತೆ ಆಚರಿಸು ಎನ್ನಲ್ಲಿ3
***