ರಾಗ : ದೇಶ್ ತಾಳ : ತ್ರಿತಾಳ
ರಂಗವಲಿದ ರಾಯ ನೀ । ಸ ।
ತ್ಸಂಗ ಪಾಲಿಸಯ್ಯಾ ।। ಪಲ್ಲವಿ ।।
ಬುಧ ಜನ ನುತ ಮನುಜ । ಪಂಚ ।
ವದನಾರ್ಯರ ತನುಜ ।
ಪದಯ ನಿನ್ನಯ ಪದ ।।
ಪದುಮವ ಭಜಿಸಿದೆ ।
ಅಧಮನಾದೆ ನಾ ಸದಮಲಕಾಯ ।। ಚರಣ ।।
ನುತಿಸುವೆ ಜಗದೊಡೆಯ ನಾಮಕ ।
ಸತತ ಪಿಡಿಯೊ ಕೈಯ್ಯ ।
ಕ್ಷಿತಿಯೊಳು ಪೂರ್ವದಿ ।।
ಪತಿತರ ಸಲಹಲು ।
ಶತಕ್ರತುರಾಯರ ಸುತನೆನಿಸಿದ ಗುರು ।। ಚರಣ ।।
ವೃಂದಾರಕಸ್ತೋಮ ವಂದಿತ ।
ನಂದನಂದನ । ಶ್ಯಾಮ ।
ಸುಂದರನೊಲಿಮೆಲಿ ।।
ಛಂದದಿ ಸ್ತಂಭ । ಸು ।
ಮಂದಿರದೊಳು ನಿಂದು ಮೆರೆದ ಗುರು ।। ಚರಣ ।।
***