Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಶ್ರೀ ವತ್ಸಲಾಂಛ purandara vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಶ್ರೀ ವತ್ಸಲಾಂಛ purandara vittala. Show all posts

Thursday, 5 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ಶ್ರೀ ವತ್ಸಲಾಂಛ purandara vittala

ಪುರಂದರದಾಸರು

ಜಯ ಮಂಗಳಂ ನಿತ್ಯ ಶುಭಮಂಗಳಂ ||ಪ.

ಶ್ರೀ ವತ್ಸಲಾಂಛನಗೆ ಕ್ಷೀರಾಬ್ಧಿ ವಾಸಗೆ |ಗೋವರ್ಧನೋದ್ಧಾರ ಗೋವಿಂದಗೆ ||ಮಾವ ಕಂಸನ ಕೊಂದುಮಕರಕುಂಡಲ ಧರಿಸಿ |ಜೀವಾತ್ಮನಾದ ಚಿನ್ಮಯರೂಪಗೆ 1

ಅಂಬುಧಿಯ ಶಯನಗೆ ಅಖಿಲ ಭೂತೇಶಗೆ |ತುಂಬುರ - ನಾರದ ಮುನಿವಂದ್ಯಗೆ ||ಎಂಭತ್ತನಾಲ್ಕು ಲಕ್ಷ ಯೋನಿಗಳ ರಾಶಿಯನು |ಗೊಂಬೆಯನು ಮಾಡಿ ಕುಣಿಸುವ ದೇವಗೆ 2

ಕಂದರ್ಪನಯ್ಯನಿಗೆ ಕೋಟಿ ಲಾವಣ್ಯನಿಗೆಸುಂದರ ಮೂರುತಿಹರಿ ಸರ್ವೋತ್ತಮನಿಗೆ ||ಕಂದ ಪ್ರಹ್ಲಾದನ ಕಾಯ್ದ ದೇವನಿಗೆಅರ |............................................. 3

ಪನ್ನಂಗಶಯನಗೆಪಾವನ್ನ ಚರಿತೆಗೆ |ಸನ್ನುತರಾದ ಸಜ್ಜನ ಪಾಲಿಗೆ ||ಎನ್ನೊಡೆಯ ಸಿರಿದೇವಿಯರಸು ಮುದ್ದುರಂಗಗೆ |ತನ್ನ ನಂಬಿದವರನು ಸಲಹುವವಗೆ 4

ಕರಿರಾಜವರದಗೆ ಕರುಣಾಸಮುದ್ರಗೆ |ಗರುಡ ಗಮನನಿಗೆ ವೈಭವಹಾರಗೆ ||ವರಪುರಂದರವಿಠಲ ಕಂಬುಕಂದರನಿಗೆ |ಅರವಿಂದನಾಭನಿಗೆ ಅಜನ ಪಿತಗೆ 5
******