..
kruti by ವಿದ್ಯಾರತ್ನಾಕರತೀರ್ಥರು vidyaratnakara teertharu
ನೀರಜಾಕ್ಷೇರೆಲ್ಲ ಬಂದು ಮಾರಜನಕಗೆ
ಆರತಿ ಎತ್ತಿರೇ ನಾರಿಮಣಿ ಶ್ರೀ ರುಕ್ಮಿಣಿಮಣಿಗೆ ಪ
ವೇದವನು ಕದ್ದ ಖಳನ ಬೇಧಿಸಿದವಗೆ
ಆದರದಿಂದ ಮಂದರವೆಂಬೋ ಭೂಧರ ತಂದವಗೆ 1
ಕುಂಭಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆ
ಕಂಭದಿ ಬಂದು ದನುಜ ಡಿಂಭನ ಕಾಯ್ದ ನೃಹರಿಗೆ 2
ಭೂಮಿ ಬೇಡಿದವನಿಗೆ ದುಷ್ಟ ಭೂಮಿಪ ಹರನಿಗೆ
ಕಾಮಿನಿಚೋರನ ಶಿರವ ತರಿದ ಸ್ವಾಮಿ ರಾಮಗೆ 3
ಪಾಂಡುಸುತರ ಸಲಹಿ ಖಳರ ದಂಡಿಸಿದವಗೆ
ಚಂಡತ್ರಿಪುರರ ಹೆಂಡರ ವ್ರತವ ಖಂಡನೆ ಮಾಳ್ಪಗೆ 4
ತುರಗವೇರಿ ದುರುಳ ನೃಪರ ತರಿದ ಕಲ್ಕಿಗೆ
ವರದ ನಾಮಗಿರಿ ಶ್ರೀಹರಿಯ ಚರಣಕಮಲಕೆ 5
***