Showing posts with label ಲಕ್ಷುಮೀಯ ಮಸ್ತಕಕ್ಕೆ vaikunta vittala ankita suladi ಹರಿ ಮಹಿಮಾ ಸುಳಾದಿ LAKSHUMEEYA MASTAKAKKE HARI MAHIMA SULADI. Show all posts
Showing posts with label ಲಕ್ಷುಮೀಯ ಮಸ್ತಕಕ್ಕೆ vaikunta vittala ankita suladi ಹರಿ ಮಹಿಮಾ ಸುಳಾದಿ LAKSHUMEEYA MASTAKAKKE HARI MAHIMA SULADI. Show all posts

Thursday 22 July 2021

ಲಕ್ಷುಮೀಯ ಮಸ್ತಕಕ್ಕೆ vaikunta vittala ankita suladi ಹರಿ ಮಹಿಮಾ ಸುಳಾದಿ LAKSHUMEEYA MASTAKAKKE HARI MAHIMA SULADI

Audio by Vidwan Sumukh Moudgalya 


ಶ್ರೀ ವೈಕುಂಠದಾಸಾರ್ಯ ವಿರಚಿತ 


 ಶ್ರೀಹರಿ ಮಹಿಮಾ ಸುಳಾದಿ 


 ರಾಗ : ಮೋಹನ 


 ಧ್ರುವತಾಳ 


ಲಕ್ಷುಮೀಯ ಮಸ್ತಕಕ್ಕೆ ಮಣಿಮೌಳಿಯಾದಾ

ಲಕ್ಷುಮೀಯ ಅಕ್ಷಿಮಧುಪ ಕರುಣಾಬ್ಜವಾದಾ

ಲಕ್ಷುಮೀಯ ಭುಜಕ್ಕೆ ಭುಜಕೀರ್ತಿಯಾದಾ

ಲಕ್ಷುಮೀಯ ಕರಾಬ್ಜಕ್ಕೆ ರಾಜಹಂಸನಾದಾ

ಲಕ್ಷುಮೀಯ ಪೂ ಮಾಣಿಕ್ಯ ಪದಕವಾದಾ

ಲಕ್ಷುಮೀಯ ಮಹಾಹಾರ ಕೇಯೂರವಾದಾ

ಲಕ್ಷುಮೀಯಾನಂದಾಬ್ಧಿಗೆ ಪೂರ್ಣಚಂದ್ರನಾದಾ

ಲಕ್ಷುಮೀಯ ನಿನ್ನ ಪಾದ ಸರಸಿಜ ಎನ್ನ 

ಮಸ್ತಕದಲೊಮ್ಮೆ ಅಲಂಕರಿಸು

 ವೈಕುಂಠವಿಠ್ಠಲ  ಪಾದಾ ಅನಂತಮಹಿಮಾ॥೧॥


 ಮಟ್ಟತಾಳ 


ಅಜನಿಗೊಲಿದುದೇಹಾರವಾದಾ ಭವ

ನಿಗೊಲಿದು ಸಾಲಿಗ್ರಾಮದೇವರಾದಾ

ಯಜು ಸಾಮ ಮುಖ್ಯನಿಗಮ ಮೌಳಿಮಣಿಯಾದಾ

ಭಜಕ ದಿವಿಜನಿಕರಾಪಾರಬ್ರಹ್ಮವಾದಾ

ತ್ರಿಜಗವಂದಿತಪದ ವೈಕುಂಠವಿಠ್ಠಲ 

ನಿಜಕರುಣದಿಂದೆನ್ನ ಮಸ್ತಕದ ಮೇಲೊಮ್ಮೆ ದಯಮಾಡು॥೨॥


 ರೂಪಕತಾಳ 


ಮುನಿಹೃದಯ ನೀಕೇತನ ಜ್ಯೋತಿಯ

ತನು ಸೊಬಗಿನ ಪುಂಜವನನುದಿನ

ಸನಕಾದಿಗಳಾಡುತ್ತ ಪಾಡುತ್ತ

ನೆನೆವ ಪರಮ ಕರುಣದಮೂರ್ತಿಯ

ಘನಪಾದ ವೈಕುಂಠವಿಠ್ಠಲ 

ತಾನುಸರಸಿಗೆ ಸರಸಿಜವಾಗಿಡೊ॥೩॥


 ಝಂಪೆತಾಳ 


ದುರಿತ ತಿಮಿರವಡಗದು ಮನ

ಸರಸಿಜವರಳದು

ಹರಿ ನಿನ್ನ ಅರುಣಕಿರಣ ಭರಿತಚರಣ

ಸರಸಿಜ ಸಖನುದಯಿಸದಿರೇ

ಪರಮ ದಯಾನಿಧೆ

ಸಿರಿ ವೈಕುಂಠವಿಠ್ಠಲರೇಯ ಎನ್ನ ಬಿನ್ನಪವಿದು॥೪॥


 ತ್ರಿವಿಡಿತಾಳ 


ಪಾದಾಂಬುಜ ಮಧುಕರ

ಪಾದಾಂಬುಜ ಭೂಮಿಯಂತೆ ಬಿಂದುವಂತೆ ವಾಮ-

ಪಾದಕರ್ಣಿಕೆಯಾಕಾಶದಂತೆ ಶಿವ-

ನಾದರದಿ ಧರಿಸಿದ ಗಂಗೆಯಂತೆ

ಆದಿದೇವ ಶ್ರೀ ವೈಕುಂಠವಿಠಲ ದಯಾನಿಧೆ॥೫॥


 ಅಟ್ಟತಾಳ 


ಕಡಹದ ಮರನನಡರಿ ಕಾಳಿಂಗನ

ಮಡುವ ಧುಮುಕಿ ಕಾಳಿಂಗನ ಶಿರದಲ್ಲಿ

ಧಡುಮನೆ ವಿಷಜಾಲ ಧಡಿಗಳ

ವೊಡಿಗೆ ಸಪ್ಪುಳಿಗೆ ಕುಣಿದಾಡಿದೆ ಗಡಾ

ಕಡುಮೃದುಪಾದ ವೈಕುಂಠವಿಠ್ಠಲಾ 

ಇಡು ಎನ್ನ ಕ್ರೋಧಾಹಿ ಮದವಳಿಯಲಿ॥೬॥


 ಆದಿತಾಳ 


ಕಂಬು ಕೊಳಲು ತುತ್ತುರಿ ಮವುರಿಗಳು

ಸಂಭ್ರಮದಲಿ ಗೋಪಾಲರು ನೆರೆದು

ಭೊಂ ಭೊಂ ಭೊ ತುತ್ತರುತ್ತುರೆನೆ ಸುರ

ರಂಬರದಲಿ ಪೂಮಳೆಗರೆಯೆ

ಕಂಬುಕಂಠ ವೈಕುಂಠವಿಠ್ಠಲ ಪಾದಾ

ಇಂಬಾಗಿ ಎನ್ನ ಹೃದಯ ಮಧ್ಯದಲಿಡು॥೭॥


 ಜತಿ 


ದೇವ ದೇವ ಜಗಂಗಳ ಪೊರೆವಾ

ಶ್ರೀ ವೈಕುಂಠವಿಠ್ಠಲ ಸಲಿಸೋ ಬಿನ್ನಪವ॥೮॥

****