Showing posts with label ಪುಷ್ಪಸೇವೆಯ ನೋಡುವಾ ಬನ್ನಿರೆ ಪುಷ್ಪಸೇವೆಯ ಗೀತೆ venkatakrishna. Show all posts
Showing posts with label ಪುಷ್ಪಸೇವೆಯ ನೋಡುವಾ ಬನ್ನಿರೆ ಪುಷ್ಪಸೇವೆಯ ಗೀತೆ venkatakrishna. Show all posts

Tuesday 1 June 2021

ಪುಷ್ಪಸೇವೆಯ ನೋಡುವಾ ಬನ್ನಿರೆ ಪುಷ್ಪಸೇವೆಯ ಗೀತೆ ankita venkatakrishna

 by yadugiriyamma  

ಪುಷ್ಪಸೇವೆಯ ಗೀತೆ

ಪುಷ್ಪಸೇವೆಯ ನೋಡುವಾ ಬನ್ನಿರೆ ನ

ಮ್ಮಪ್ರಮೇಯ ರಂಗನಾ ಪ.


ಕ್ಷಿಪ್ರದಿಂದಲೆ ಬಂದು ಚಪ್ಪರದಲಿ ನಿಂದು

ವಿಪ್ರರೆಲ್ಲರು ತಂದು ಪುಷ್ಪ ಸಮರ್ಪಿಸುವ ಅ.ಪ.

ಮೇಷರಾಶಿಗೆ ರವಿಯು ಬರಲು

ವಾಸುದೇವ ಹರಿಯು ಆಗ

ಬೇಸಿಗೆ ತಾಪವ ಪರಿಹರಿಸುವೆನೆಂದು

ವಾಸನೆಗಂಧವ ಮೈಯೊಳು ಪೂಸಿದ 1

ಕರ್ಪೂರದ ಕಸ್ತೂರಿ ಗಂಧವ ತಂದು

[ಒಪ್ಪದಿಂ] ವಕ್ಷಸ್ಥಳದಿ ಧರಿಸಿ ವಕುಳ

ಪುಷ್ಪಗಳಿಂದ ಮೌಳಿಯ [ಲಂಕ]ರಿಸಿದ

ರು ಪನ್ನೀರವಲ್ಲಿಯ ಚೆನ್ನಾಗಿ ಪ್ರೋಕ್ಷಿಸಿದರು2

ಮರುಗ ಮಲ್ಲಿಗೆ ಜಾಜಿ ಮುಡಿವಾಳ

ಇರವಂತಿಗೆ ಪಚ್ಚೆ ದವನ ಕೇದಿಗೆ ಪಾ

ದರಿ ಕಮಲ ಸಂಪಿಗೆ ಪುಷ್ಪಮಾಲೆಯ

ಧರಿಸಿ ಪನ್ನೀರ ತಳಿದರಾಗ 3

ಪುಷ್ಪದ ದುಬಟಿಯನು ತಂದು ನಮ್ಮ

ಸರ್ಪಶಯನನಿಗ್ಹೊದ್ದಿಸೆ

ಕ್ಷಿಪ್ರದಿಂದಲೇ ತೀರ್ಥಪ್ರಸಾದವನಿತ್ತು ಎ

ನ್ನಪ್ಪ ರಂಗನು ಬಂದ ಒಯ್ಯಾರ ನಡೆಯಿಂದ 4

ಪರಿಪರಿ, ವಾದ್ಯಂಗಳು ಭೋರಿಡುತಿರೆ

ವರಾಂಗನೆಯರು ಪಾಡೆ

ಸುರರು ಭೂಸುರ ನರರೆಲ್ಲರ ಕೂಡಿ

ದೊರೆಯುಮಂಟಪಕ್ಕಾಗ ಪರಮಪುರಷ ಬಂದ 5

ಅಲ್ಲಿ ಪೂಜೆಯ ಗ್ರಹಿಸಿ ರಂಗಯ್ಯ ತಾ

ಎಲ್ಲರೊಡನೆ ಪೊರಟಿರೆ

ವಲ್ಲಭನನು ವೀಣೆಸೊಲ್ಲಿನಿಂ ಪಾಡುತಿರೆ ಲಕ್ಷ್ಮೀ

ಮೆಲ್ಲಮೆಲ್ಲನೆ ಬಂದ ಏಕಾಂತದಿ ರಂಗ 6

ಚಿತ್ರಪೌರ್ಣಮಿಯಲ್ಲಿ ಶ್ರೀರಂಗ ವಿ

ಚಿತ್ರದಿಂದಲೆ ಪೊರಟು

ಉತ್ತರಕಾವೇರಿ ತೀರದ ಮಂಟಪದಲಿ ನಿಂದು

ಭಕ್ತವತ್ಸಲನು ಮಜ್ಜನವ ಮಾಡಿದನಾಗ 7

ಮಕರಿ ಕಾಲ್ಪಿಡಿಯಲಾಗ ಮತಂಗ

ವು ಕರೆಯೆ ನಿಮ್ಮನು ಅತಿ ವೇಗದಿಂದ

ಚಕ್ರದಿ ನಕ್ರನ ಕೊಂದು ಕರಿಯ

ರಕ್ಷಿಸಿ ಬಂದ ಕರುಣದಿಂದಲೇ ರಂಗ 8

ಕಲಿಯುಗದೊಳಗಿರುವ ಕರ್ಮಿಗಳನ್ನು

ಸಲಹುವೆನೆಂದೆನುತಾ ಕರುಣದಿಂ

ದಲೆ ಅರ್ಚಾವತಾರವ ಮಾಡಿ

[ಸಲೆ] ಬಿರುದು ಧರಿಸಿ ಬಂದ ವರದವೆಂಕಟರಂಗ 9

****