kruti by bhupati vittalaru ( kakhandaki Ramacharyaru)
ಎಂಥ ಸುಂದರವಾದ ವೃಂದಾವನಾ
ನಿಂತು ನೋಡಲು ಮನಕೆ ಸಂತೋಷವಾಗುವದು ಪ
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ದಿವ್ಯಧೀರ ಗಂಭೀರ ಸುಮನೋಹರ ಸುಮೂರ್ತಿರಾರಾಜಿಸುತಿಹುದು ಮುಗಳುನಗೆ ಮುಖದಿಂದಾಶರಣಾಗತರಿಗೆಲ್ಲ ಅಭಯ ಹಸ್ತವ ನೀಡಿ 1
ಪ್ರೇರಕರು ತಾವಾಗಿ ಪ್ರೇರ್ಯರೊಬ್ಬನ ಮಾಡಿಕಾರಾಗಿರನ ಕನಸು ಮನಸಿನಲಿ ಪೋಗಿಇರಬೇಕು 'ೀಗೆಂಬ ವೃಂದಾವನದಿ ಚಿತ್ರತೋರಿಸುತ ಅಂತರಂಗದಿ ನಿಂದು ಮಾಡಿಸಿದ 2
ಅಡಿಗಡಿಗೆ ಮ'ಮೆಯನು ತೋರಿಸುತ ಗಲಗಲಿಗೆನಡೆತಂದು ಶ್ರೀ ಮಠವ ಹ'್ಮುಕೊಂಡಿಹರುಸಡಗರದಿ ಭಕುತರಿಂ ಸೇವೆಕೊಳ್ಳುತಲಿಹರುಬಡವರಿಗೆ ಭಾಗ್ಯ ನಿಧಿಯು ಬಂದಂತೆ ಆಯ್ತು 3
ಅಲ್ಲಿ ಮಂತ್ರಾಲಯವು ಇಲ್ಲಿ ಗಾಲವಕ್ಷೇತ್ರಅಲ್ಲಿ ತುಂಗಾ ಇಲ್ಲಿ ಕೃಷ್ಣವೇಣಿಅಲ್ಲಿ ಪ್ರಹ್ಲಾದರಾಜ ಯೋಗ ಮಾಡಿದನು ಇಲ್ಲಿತಪವ ಗೈದಿಹರು ಗಾಲವ ಮರ್ಹಗಳು 4
ಅಲ್ಲಿ ರಾಯರಬಂಡಿ ಇಲ್ಲಿ ಋಗಳ ಬಂಡಿಅಲ್ಲಿ ಮಂಚಾಲೆಮ್ಮಾ ಇಲ್ಲಿ ಜಗದಂಬಾಅಲ್ಲಿ ಹೊಳೆದಾಟಿದರೆ ಪಂಚಮುಖಿಪ್ರಾಣೇಶಇಲ್ಲಿ ಹೊಳೆ ದಾಟಿದರೆ ಸಂಜೀವ ಪ್ರಾಣೇಶ 5
ಕಲಿಯುಗದ ಸುರಧೇನು ಕಲ್ಪತರು ಗುರುರಾಯಗಲಗಲಿಯ ಭಾಗ್ಯ'ದು ಬಂದು ನಿಲಿಸಿಹನುಕಲುಷವರ್ಜಿತರಾಗಿ ದರುಶನವ ಮಾಡಿದರೆಕರೆದು ಈಪ್ಸಿತವ ಕೊಡುವ ಪರಮ ಕರುಣಾಳು 6
ಪಾಪಿ ಕೋಪಿಷ್ಠರಿಗೆ ಸೇವೆ ದಕ್ಕುವದಿಲ್ಲಮಾಂ ಪಾ' ಪಾ' ಎಂಬುವ ಭಕುತರಾತಾಪತ್ರಯವ ಕಳೆದು ಸುಪ'ತ್ರರನು ಮಾಡಿಭೂಪತಿ'ಠ್ಠಲನ ಅಪರೋಕ್ಷ ಮಾಡಿಸುವ 7
***