Showing posts with label ಪಾಲಿಸು ಭಕ್ತವತ್ಸಲನೇ ನಿನ್ನಬಾಲಕ govinda. Show all posts
Showing posts with label ಪಾಲಿಸು ಭಕ್ತವತ್ಸಲನೇ ನಿನ್ನಬಾಲಕ govinda. Show all posts

Wednesday, 13 November 2019

ಪಾಲಿಸು ಭಕ್ತವತ್ಸಲನೇ ನಿನ್ನಬಾಲಕ ankita govinda

by ಗೋವಿಂದದಾಸ
ಪಾಲಿಸು ಭಕ್ತವತ್ಸಲನೇ ನಿನ್ನಬಾಲಕನಂತೆನ್ನ ಸಲಹೋ ಶ್ರೀವರನೇ ಪ

ಬಾಲ ಪ್ರಹ್ಲಾದ ಧ್ರುವನು ಚಂದ್ರಹಾಸಮೇಲಾದ ಮುಚುಕುಂದನಂತೆನ್ನ ಸತತ ಅ.ಪ

ಸುರರುನಾರದರು ಕಿನ್ನರರುಮುನಿವರರು ವಸಿಷ್ಠ ವಾಲ್ಮೀಕಿ ಗೌತಮರುಗರುಡ ಗಂಧರ್ವ ಗಾಯಕ ಯಕ್ಷವಾಸುಕಿತರಣಿನಂದನ ಆಂಜನೇಯ ಜಾಂಬವರಂತೆ 1

ನಳ ನಹುಷ ಸಗರಂಬರೀಷ ನಿನ್ನ ಒಲಿಸಿಭಗೀರಥ ಬಲಿಯುನಾಕೇಶಸಲಹೆಂದು ಹರಿಶ್ಚಂದ್ರರುಕ್ಮಾಂಗದ ವಿಭೀಷಣಗೊಲಿದಧರ್ಮಜ ಪಾರ್ಥ ಕರಿರಾಜನಂತೆ 2

ಚರಣದಿ ಅಹಲ್ಯೆಯನು ಕಾಯ್ದೆ ನೀನುಪೊರೆದೆ ಶಬರಿಯನ್ನು ಕುಬುಜೆಯನೆನದೆಹರುಷದಿ ಎರಡೆಂಟು ಸಾವಿರ ತರುಣಿಯರೊಡಗೂಡಿಸೆರಗಿಗೆ ವರವಿತ್ತೆ ದ್ರುಪದನಂದನೆಗೆ 3

ಸಿಂಧುಶಯನ ನಿನ್ನ ಕರುಣ ಎನ-ಗೆಂದಿಗೆ ತೋರುವೆ ಶ್ರೀಲಕ್ಷ್ಮೀರಮಣಮಂದರಧರಅರವಿಂದವದನಹರಿನಂದನ ಕಂದ ಗೋವಿಂದನೆ ದಯದಿ 4
*******