..
ಮೋಜು ಮಾಡಿದಿರ ರುಕ್ಮಿಣಿ ಭಾಮೆಮೋಜು ಮಾಡಿದಿರರಾಜಪುತ್ರರ ವಾಜಿಗಾಣುತಸೋಜಿಗಾಗೇದರಾಜ ರಾಜರ ಪ.
ಚದುರೆ ದ್ರೌಪದಿದೇವಿ ಮುದದಿ ಮುಯ್ಯವ ತಾರೆಇದುರಿಗೆ ಬಾರದೆ ಕದವನಿಕ್ಕಿ ಬಹಳೆ1
ಚಿಕ್ಕ ಸುಭದ್ರಾತಾ ಅಕ್ಕರದಿ ಬರುವಾಗಹೊಕ್ಕು ಒಳಗೆ ಕದವ ನಿಕ್ಕಿಕೊಂಡು ಬಹಳೆ2
ವಸುಧೆರಾಯರು ನಿಮ್ಮ ಕುಶಲಕ್ಕೆ ಬೆರಗಾಗಿಮುಸು ಮುಸು ನಗುತಾರೆ ಮುಸುಕಿನೊಳಗೆ ಬಹಳೆ3
ಕತ್ತಲೆಗಂಜುತ ಮಿತ್ರೆಯರು ನಿಂತೆವುಪೃಥ್ವಿರಾಯರು ನಿಮ್ಮ ಅರ್ಥಿಗೆ ನಗುತಾರೆ ಬಹಳೆ 4
ಕೃಷ್ಣ ರಾಮೇಶನ ಪಟ್ಟದರಾಣಿಯರುಎಷ್ಟು ಶಾಣೇರೆಂದು ಅಷ್ಟ್ಟೂರು ನಗುತಾರೆ ಬಹಳೆ5
****