Showing posts with label ಹಯಗ್ರೀವ ವಿಠ್ಠಲ ನಿನ್ನವನೆಂದು muddu mohana vittala hayagreeva vittala dasa stutih. Show all posts
Showing posts with label ಹಯಗ್ರೀವ ವಿಠ್ಠಲ ನಿನ್ನವನೆಂದು muddu mohana vittala hayagreeva vittala dasa stutih. Show all posts

Saturday 1 May 2021

ಹಯಗ್ರೀವ ವಿಠ್ಠಲ ನಿನ್ನವನೆಂದು ankita muddu mohana vittala hayagreeva vittala dasa stutih

" ಶ್ರೀ ಮುದ್ದುಮೋಹನವಿಠ್ಠಲರು ಶ್ರೀ ತಿಪ್ಪಾದಾಸರು ( ಶ್ರೀ ಕೃಷ್ಣದಾಸರಿಗೆ ) ನೀಡಿದ ಅಂಕಿತ ನಾಮ" - " ಶ್ರೀ ಹಯಗ್ರೀವ ವಿಠ್ಠಲ " 

ರಾಗ : ಕಾಂಬೋಧಿ ತಾಳ : ಝಂಪೆ 


ಹಯಗ್ರೀವ ವಿಠ್ಠಲ ನಿನ್ನವನೆಂದು 

ಕಾಯಬೇಕಿವನ ।। ಪಲ್ಲವಿ ।। 


ಮಾಯಪತಿಯೇ ನಿನಗೆ 

ಸತತ ಅಭಿವಂದಿಪೆನು ।। ಅ . ಪ ।। 


ಬಾದರಾಯಣ ಇವಗೆ 

ಬಂದ ಬಾಧೆಗಳ ಪರಿಹರಿಸಿ ।

ಮೇದಿನಿಯೊಳಗೆ ಬಹು 

ಕೀರ್ತಿವಂತನ ಮಾಡಿ ।

ಬೋಧತೀರ್ಥರ ಮತದಿ

 ಪೂರ್ಣ ಭಕುತಿಯ ಕೊಟ್ಟು ।

ಆದರದಿ ಕಾಯ್ದುದೋ 

ಅಮರೇಶವಂದ್ಯಾ ।। ಚರಣ ।।


ನಿನ್ನವನು ಇವನೆಂದು 

ಚೆನ್ನಾಗಿ ಪ್ರಾರ್ಥಿಸಿದೆ ।

ಸಣ್ಣವನಲಿ ಇದ್ದ 

ಅಜ್ಞಾನವ ಬಿಡಿಸಿ ।

ಘನ್ನ ಸುಜ್ಞಾನ ವಿರಾಗಿ 

ಮಾರ್ಗವ ತೋರಿ ।

ಚೆನ್ನಾಗಿ ಪಾಲಿಸುವುದೋ 

ಘನ್ನ ಮಹಿಮಾ ।। ಚರಣ ।। 


ಪಂಚ ರೂಪಾತ್ಮಕನೆ 

ದ್ವಿಪಂಚಕರಣದೊಳಿದ್ದು ।

ಪಂಚಭೇದ ತಾರ-

ತಮ್ಯವನ್ನು ತಿಳಿಸಿ ।

ಪಂಚಮುಖನೈಯ್ಯ ಶಿರಿ 

ಮುದ್ದುಮೋಹನವಿಠ್ಠಲ ।

ಸಂಚಿತಾಗಮಿಗಳ ಪರಿಹರಿಸೋ 

ಧೊರೆಯೇ ।। ಚರಣ ।।

****