Showing posts with label ಮಂಗಳಂ ಜಯ ಮಂಗಳಂ ಮುಕುಟಕ್ಕೆ ಮಂಗಳ ಮತ್ಸ್ಯ purandara vittala. Show all posts
Showing posts with label ಮಂಗಳಂ ಜಯ ಮಂಗಳಂ ಮುಕುಟಕ್ಕೆ ಮಂಗಳ ಮತ್ಸ್ಯ purandara vittala. Show all posts

Saturday, 7 December 2019

ಮಂಗಳಂ ಜಯ ಮಂಗಳಂ ಮುಕುಟಕ್ಕೆ ಮಂಗಳ ಮತ್ಸ್ಯ purandara vittala

ರಾಗ ಸುರುಟಿ ಆದಿತಾಳ

ಮಂಗಳಂ ಜಯ ಮಂಗಳಂ ||ಪ||

ಮುಕುಟಕ್ಕೆ ಮಂಗಳ ಮತ್ಸ್ಯವತಾರಗೆ
ಮುಖಕ್ಕೆ ಮಂಗಳ ಮುದ್ದು ಕೂರ್ಮಗೆ
ಸುಕಂಠಕೆ ಮಂಗಳ ಸೂಕರ ರೂಪಗೆ
ನಖಕ್ಕೆ ಮಂಗಳ ನರಸಿಂಹಗೆ ||

ವಕ್ಷಕ್ಕೆ ಮಂಗಳ ವಟು ವಾಮನಗೆ
ಪಕ್ಷಕ್ಕೆ ಮಂಗಳ ಪರಶುರಾಮಗೆ
ಕಕ್ಷಕ್ಕೆ ಮಂಗಳ ಕಾಕುತ್ಸ್ಥರಾಮಗೆ
ಕುಕ್ಷಿಗೆ ಮಂಗಳ ಶ್ರೀಕೃಷ್ಣಗೆ ||

ಊರುಗಳಿಗೆ ಮಂಗಳ ಉತ್ತಮಬೌದ್ಧಗೆ
ಚರಣಕ್ಕೆ ಮಂಗಳ ಚೆಲುವ ಕಲ್ಕಿಗೆ
ಪರಿಪರಿ ರೂಪಗೆ ಪರಮಾನಂದಗೆ
ಪುರಂದರವಿಠಲಗೆ ಜಯಮಂಗಳಂ ||
***

pallavi

mangaLa mAramaNage mangaLa bhUramaNage jaya mangaLa niya shubha mangaLa

caraNam 1

mukuTakke mangaLa matsyAvatArage mukhage mangaLa muddu kUrmanige
su-kaNThakke mangaLa sUkararUpake nakhake mangaLa muddu narasihage

caraNam 2

vrSakke mangaLa vaTuvAmanige pakSakke mangaLa bhArgavage
kakSake mangaLa kAkustha rAmage kukSige mangaLa shrI krSNage

caraNam 3

UrugaLike mangaLa uttama bauddhage craNake mangaLa kalkyanige
paripari rUpage parama mangaLa namma purandara viTTalage shubha mangaLa
***