Showing posts with label ಶ್ರೀನಿವಾಸನಂಘ್ರಿ ಸೇವೆ ಮಾಡುವ ಬನ್ನಿ ಧೃಢ ಮತಿ purandara vittala. Show all posts
Showing posts with label ಶ್ರೀನಿವಾಸನಂಘ್ರಿ ಸೇವೆ ಮಾಡುವ ಬನ್ನಿ ಧೃಢ ಮತಿ purandara vittala. Show all posts

Friday, 6 December 2019

ಶ್ರೀನಿವಾಸನಂಘ್ರಿ ಸೇವೆ ಮಾಡುವ ಬನ್ನಿ ಧೃಢ ಮತಿ purandara vittala

ರಾಗ ಆರಭಿ ಅಟ ತಾಳ

ಶ್ರೀನಿವಾಸನಂಘ್ರಿಸೇವೆ ಮಾಡುವ ಬನ್ನಿ ಧೃಢ ಮತಿಯುಳ್ಳವರು ||ಪ ||
ಜ್ಞಾನ ಭಕ್ತಿ ವೈರಾಗ್ಯಾದಿ ಜ್ಞಾನವೆಮ್ಮ ನಿರತ ಬರಲು
ಧ್ಯಾನಿಸುವ ಸನ್ನಿಧಿಯಲ್ಲಿ ಸಾನುರಾಗದಿಂದ ಪಾಡಿ ||ಅ ||

ಬಂದ ದುರಿತಗಳನೆಲ್ಲ ದಿನ ದಿನ ತಾನೊಂದು ಗಳಿಗೆ ಹಿಂದು
ಮುಂದು ಇಂದು ಹಿತದಿಂದ ಬಂದು ನಿಂದು ಭಯ ತೋರಿದಂತೆ
ನಂದನಂದನ ದಿವ್ಯ ಧಿಮಿ ಧಿಮಿ ಧಿಮಿಕೆಂದು ಕುಣಿವ
ನಿಂದು ಗೆಜ್ಜೆ ಘಲಿಘಲಿರೆನ್ನೆ ಮಂದಿರದೋಳ್ ಮೋಹಿಸುತ್ತ ||

ಕಾಮಕ್ರೋದಾಧಿಗಳ ಕಷ್ಟಗಳ ಕಳೆದು ಕೆಡಹಿ ಕಾರುಣ್ಯದಿಂದ
ಹೇಮ ಹೆಣ್ಣಿನ ಹಿತವ ಬಿಡಿಸಿ ರಾಮನಾಮ ವ್ರತ ವಾಕ್ಯಗಳ
ಸೋಮಶೇಖರ ರಾಣಿ ಸಹಿತ ಪಾಮರಸಂಘದಲಿಹ
ಪ್ರೇಮ ಬೇಡವೆಂದು ರಾಮ ನಾಜನ ವರಗಳಿತ್ತ ||

ಮೂರ್ಜಗದ ಮೂಲಕಾರಣನ ಮುನಿಯ ಮನದಿ ಮಹಾನಿಧಿಯ
ಸಾರ್ಜಗದ ಸಭೆಯ ಚೆನ್ನಿಗನ ವಾದೀವುದ ವರವೀವುದಂತೆ
ರಾಜಶೇಖರ ರಾಣಿಸಹಿತ ಶ್ರೀಯನಾಥರ ಶಿಷ್ಯ ಸೇರಿ ಪೂ-
ರ್ವಜಿತವಾಗಿರಲೆಂದು ರಾಜಿಸುವ ಪುರಂದರವಿಠಲ ||
***

pallavi

shrInivAsananghari sEve mADuva banni dhrDha matiyuLLavaru

anupallavi

jnAna bhakti vairAgyadi jnAnavemma nirata baralu dhyAnisuva sannidhiyalli sAnurAgadinda pADi

caraNam 1

banda duritagaLanella dina dina tAnondu gaLige hindu
mundu indu hitadinda bandu nindu bhaya tOridante
nanda nandana divya dhimi dhimi dhimikendu kuNiva
nindu gejje ghali ghalirenna mandiradOL mOhisutta

caraNam 2

kAma krOdAdhigaLa kaSTagaLa kaLedu keDahi kAruNyadinda
hEma heNNina hitava biDisi rAma rAma vrata vAkyagaLa
sOmashEkhara rANi sahita pAmara sanghadaliha
prEma bEDavendu rAma nAjana varagaLitta

caraNam 3

mUrjagada mUlakAraNa muniya manadi mahAnidhiya
sArjagada sabheya cennigana vAdIvuda varavIvudante
rAjashEkhara rANi sahita shrIya nAthara shiSya sEri
pUrva jitavAgiralendu rAjisuva purandara viTTala
***