..
kruti by Nidaguruki Jeevubai
ಎತ್ತಿದರಾರತಿ ಮುತ್ತೈದೆಯರು ಬೇಗ
ಅರ್ಥಿಯಿಂದಲಿ ಪಾಡಿ ಅಚ್ಚುತನರಸಿಗೆ ಪ
ಇಂದಿರಾದೇವಿ ಸುಗಂಧ ಸುಂದರಿ ನಮ್ಮ
ಮಂದಿರದೊಳು ನಲಿದಾಡುತಲಿಹ ತಾಯೆ
ಚಂದಿರವದನೆ ಸುಂದರಿ ಶಾಂತಿ ಜಯಮಾಯೆ
ಇಂದಿರೇಶನ ಪಟ್ಟದರಸಿ ವರ ಲಕ್ಷುಮಿಗೆ 1
ಕರುಣದಿ ವರಗಳ ಕರೆದು ಕೊಡುವಳೆಂಬ
ಬಿರುದು ನಿನ್ನದು ತಾಯೆ ಕೊಡುವರ ಅಭಯವ
ಗರುಡಗಮನನ ವಕ್ಷಸ್ಥಳದಲಿ ವಾಸಿಸು-
ತಿರುವ ಸೌಭಾಗ್ಯದ ಖಣಿಯೆ ರಕ್ಷಿಸು ಎಂದು2
ಪದ್ಮಮುಖಿಯೆ ಪದ್ಮಪಾಣಿಯೆ ಪದ್ಮಾಕ್ಷಿ
ಪದ್ಮಲೋಚನೆ ಪದ್ಮಸಂಭವೆ ಪೊಳೆವ ಹೃ-
ತ್ಪದ್ಮದಿ ಕಮಲನಾಭ ವಿಠ್ಠಲನ ತೋರಿಪದ್ಮನೇತ್ರೆಯೆ ಶ್ರೀ ಪದ್ಮಾಲಯೆ ಪೊರೆ ಎಂದು3
***