ಗುರುಗಳ ನೋಡಿರಿ ನೀವು
ಗುರುಗಳ ನೋಡಿರಿ ರಾಘವೇಂದ್ರ ಪ
ಗುರುಗಳ ನೋಡಿ ಚರಣದಿ ಬಾಗಿ
ಕರೆಕರೆ ನೀಗಿ ವರಸುಖ ಪಡೆಯಿರಿ ಅ.ಪ
ಕಾಮಿತ ಫಲಗಳ ಇತ್ತು ಇತ್ತು
ತಾಮಸ ಗುಣಗಳ ಕೆತ್ತಿ ಕೆತ್ತಿ
ರಾಮನ ಭಕ್ತಿಯ ಬಿತ್ತಿ ಬಿತ್ತಿ
ಪ್ರೇಮದಿ ಶಿಷ್ಯರ ಸಲಹುವ ನಮ್ಮ 1
ಅಂತೆ ಕಂತೇ ಸಂತೆ ಮಾತು
ಸಂತರ ಬೆಲ್ಲ ಇವರಲಿಲ್ಲ
ಎಂಥಾ ಭಕ್ತಿ ಅಂಥಾ ಫಲವು
ಕುಂತೀ ಭೀಮನ ಪಂಥಾ ಪಿಡಿದು 2
ಇಲ್ಲ ಎಂಬಗೆ ಎಲ್ಲಾ ಇಲ್ಲಾ
ನಲ್ಲ ಎಂಬಗೆ ಎಲ್ಲಾ ಉಂಟು
ಕ್ಷುಲ್ಲ ಸಂಶಯ ಹಲ್ಲು ಮುರಿದು
ಪುಲ್ಲ ನಾಭನ ಬಲ್ಲವರೊಡನೆ 3
ಕಲಿಯೆಂದೇಕೆ ಅಳುವಿರಿ ನೀವು
ಒಲಿಯಲು ಗುರುವು ಸುಳಿಯುವ ಹರಿಯು
ತುಳಿಯುತ ಕಲಿಯ ಬೆಳಸಿರಿ ಭಕ್ತಿ
ಸುಲಭವು ಕೇಳಿ ಕಳೆಯದೆ ಕಾಲ 4
ಕೃಷ್ಣ ವಿಠಲನ ಇಷ್ಟ ಗುರುಗಳು
ತೃಷ್ಠರಾದೆಡೆ ಇಷ್ಟ ಕರಗತವು
ಭಷ್ಟರಾಗದೆ ಶಿಷ್ಠರ ಸೇರುತ
ಪುಷ್ಠಿಯ ಗೈಸುತ ಸುಷ್ಠು ಜ್ಞಾನವ 5
***
ರಾಗ: [ತೋಡಿ] ತಾಳ: [ಆದಿ]