..
ಉರುಟಣಿಯಾ ಸರಸಿಜನಾಭಾಗ್ಹರುಷದಲಿ ಮಾಡುವೆನಾ ಪ
ಶಂಖಚಕ್ರಧರಾ ವೆಂಕಟೇಶ ನಿಮಗೆ |
ಕುಂಕುಮ ಹಚ್ಚುವೆ ಪಂಕಜಾಕ್ಷಿ ನಾ 1
ನಂದಗೋಪಿಕಂದ ಹಚ್ಚುವೆ ಗಂಧ
ಹಚ್ಚುವೆ ಸುಗಂಧ | ಮುಕುಂದಗೆ 2
ಯಶೋದೆಯ ಬಾಲಾ ಕಾಮಿತಶೀಲಾ
ಹಾಕುವೆನು ಮಾಲಾ ಗೋಪಾಲಗೆ 3
ಪೊಡವಿ ಪಾಲಿಪಾ | ಕಡಲಶಯನಾ |
ಕೊಡುವೆನು ವಿಡಾ ಪಿಡಿ ಬೇಗನೆ 4
ಪೊಡವಿ ಪಾಲಿಪಾ ಕಡಲಶಯನಾ |
ಶಾಮಸುಂದರವಿಠಲಾಗೆ ಬೇಗ |
ವಂದಿಸಿ ಪ್ರಾರ್ಥನೆಗೈಯುವೆನಾ 5
***