ಹರಿದಾಸನಾದರೆ ಹ್ಯಾಂಗಿರಲಿ ಬೇಕು
ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ
ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು
ಬಂದದೆಲ್ಲ ಬರಲಿ ಈಗಲೇ ಎನಬೇಕು
ಅಂದವರು ಎನಗೆ ಬಂಧುಗಳು ಎನಬೇಕು 1
ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು
ಮಾನಾಭಿಮಾನಕ್ಕೆ ಹರಿತಾನೆ ಎನಬೇಕು
ಏನಾದರಾಗಲಿ ಸುಖಬಡಲಿಬೇಕು 2
ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು
ಪರಲೋಕದ ಗತಿ ಬಯಸಬೇಕು
ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು
ದುರುಳರನ ಕಂಡರೆ ದೂರಾಗಬೇಕು 3
ತಾವರೆಮಣಿ ತುಲಸಿಸರವ ಧರಿಸಲಿಬೇಕು
ಭಾವಶುದ್ಧನಾಗಿ ತಿರುಗಬೇಕು
ಕೋವಿದರೆ ಸಂಗಡ ಕೂಡ್ಯಾಡುತಿರಬೇಕು
ಪಾವಕನಂತೆ ಇಂಪವ ಕಾಣಬೇಕು 4
ಅನ್ನಪಾನಾದಿಗಳಿಗವಸರ ಬೀಳದಿರಬೇಕು
ಕಣ್ಣಿದ್ದು ಕುರುಡನೆಂದೆನಿಸಬೇಕು
ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು
ತನ್ನೊಳಗೆ ತಾ ತಿಳಿದು ನಗುತಲಿರಬೇಕು 5
ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು
ಡಂಭಕ ಭಕುತಿಯ ಜರಿಯ ಬೇಕು
ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು
ನಂಬಿ ನರಹರಿಪಾದವೆನುತ ಸಾರಲಿ ಬೇಕು6
ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು
ಮರುತನೆ ಜಗಕೆ ಗುರುವೆನಲಿ ಬೇಕು
ಪುರಂದರದಾಸರೇ ದಾಸರೆಂದನ ಬೇಕು
ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
***
pallavi
haridAsanAdare hyAgirali bEku naralOkada cinte biTTu koDabEku
caraNam 1
indu nALeba yOcaneya biDabEku indriyagaLanella nigrahisa bEku
bandaddellA barali IgalE ena bEku andavaru enage bandhugaLu ena bEku
caraNam 2
snAnavanu biTTu harikatheya kELali bEku dAnakke sammoganAga bEku
mAnApamAnakke haritAne ena bEku EnAdarAgali sukha paDali bEku
caraNam 3
iruLu hagalu hari smaraNe mADali bEku paralOkada gati bayasa bEku
guruhiryarige vandaneya mADali bEku duruLana kNdare dUrAga bEku
caraNam 4
tAvaremaNI tuLasi sarava dharisali bEku bhAva shuddhanAgi iruva bEku
kOvidara sangaDa kUDADutira bEku pAvakanante impanu kANa bEku
caraNam 5
annapAnagalgavasara bILadira bEku kaNNIddu kuruDanendinisa bEku
cennAgi vAyu matadi lOlADa bEku tannoLage tA tiLidu nagutalira bEku
caraNam 6
bimba mUruti nilaya hdrayadali nillisa bEku Dambhaka bhakutiyenu jariya bEku
Dimbhavanu daNDisi vratava celisali bEku nambi narahai pAdavenuta sArali bEku
caraNam 7
hariyelladanyatra daivavillena bEku marutane jagake guruvenali bEku
purandaradAsare dAsarendina bEku siri vijayaviThalanna smaraNe mADali bEku
***