Showing posts with label ಹೆಣ್ಣಿಗಿಚ್ಚೈಸುವರೆ ಮೂಢ ಇದನು purandara vittala. Show all posts
Showing posts with label ಹೆಣ್ಣಿಗಿಚ್ಚೈಸುವರೆ ಮೂಢ ಇದನು purandara vittala. Show all posts

Friday 6 December 2019

ಹೆಣ್ಣಿಗಿಚ್ಚೈಸುವರೆ ಮೂಢ ಇದನು purandara vittala

ರಾಗ ಕಾಂಭೋಜಿ. ಝಂಪೆ ತಾಳ 

ಹೆಣ್ಣಿಗಿಚ್ಚೈಸುವರೆ ಮೂಢ, ಇದನು
ಕಣ್ಣು ಮೈ ಮನಗಳಿಂ ಸೋಂಕಲೇ ಬೇಡ

ತಾಯಾಗಿ ಮೊದಲೆ ಪಡೆದಿಹುದು, ಮಾತು
ಜಾಯಾಯೆಂದೆನಿಸಿ ಕಾಮದಿ ಕೆಡಹುವುದು
ಕಾಯದೊಳು ಜನಿಸುತ್ತಲಿಹುದು, ಇಂತು
ಮಾಯೆಯು ನಿನ್ನ ಬಹು ವಿಧದಿ ಕಾಡುತಲಿಹುದು

ಹಿತಶತ್ರುವಾಗಿ ಪೊಂದುವುದು, ನಿಮಿಷ
ರತಿಗೊಟ್ಟು ನಿತ್ಯ ಮುಕ್ತಿಯಾಶಾಳಿಯುವುದು
ಕ್ಷಿತಿಯ ಪೂಜ್ಯತೆ ಕೆಡಿಸುವುದು, ಮುಂದೆ
ಶತ ಜನ್ಮಂಗಳಿಗೆ ಹೊಣೆಯಾಗಿ ನಿಲ್ಲುವುದು

ಈ ಬಗೆಯ ತನು ಎಲು ನರ ಖಂಡ
ಅದರೊಳಗೆ ವಾಯುರಂಧ್ರಕಿಸಿ ಕೊಳದೊದ್ದಂಡ
ಭಗವೆಂಬುದು ಮೂತ್ರದಭಾಂಡ, ಅದ
ವಗಡಿಸದೆ ನಿಜಸುಖವಿಲ್ಲ ಕಂಡ್ಯ

ವಶವಾದ ವಾಲಿಯ ಕೊಲ್ಲಿಸಿಹುದು, ಹೀಗೆ
ಹೆಸರು ಮಾತ್ರದಿ ದಶಕಂಠನ್ನಳಿಸಿಹುದು
ಶಚಿಪತಿಯಂಗದಿ ಭಗಾಕ್ಷಯ ಎಸೆದಿಹುದು, ಹೀಗೆ
ಹೆಸರು ಮಾತ್ರದಿ ಕೀಚಕನಳಿಸಿಹುದು

ಪಶುಪತಿ ದೆಸೆಗೆಡಿಸಿಹುದು, ಹೀಗೆ
ವಸುಧೆಯೊಳು ಜೀವರ ಹಸಗೆಡಿಸುವುದು
ವಸುಧೇಶನ ನಾಮ ಮರೆಸುವುದು, ನಮ್ಮ
ಅಸಮ ಪುರಂದರವಿಠಲನ ತೊರೆದು
***

pallavi

heNNigiccaisuvare mUDha idanu kaNNu mai managaLim sOnkale bEDa

caraNam 1

tAyAgi modale paDEdihudu mattu jAyAyendenisi kAmadi keDahuvudu
kAyadoLu janisuttalihudu intu mAyeyu ninna bahu vidhadi kADutalihudu

caraNam 2

hita shatruvAgi ponduvudu nimiSa ratigoTTu nitya muktiyAshALiyuvudu
kSitiya pUjyate keDisuvudu munde shata janmangaLige hoNeyAgi nilluvudu

caraNam 3

I bageya tanu elu nara khaNDa adaroLage vAyurandharakisi koLadoddaNDa
bhagavembuddu mUtrabhANDa ada vagaDiside nija sukhavilla kaNDya

caraNam 4

vashavAda vAliya kollisihudu hIge pesaru mAtradi dashakaNThannasihudu
shacipatiyangadi bhakAkSaya esedihudu hIge hesaru mAtradi kIcakanaLisihudu

caraNam 5

pashupati dese geDisihudu hIge vasudheyoLu jIvara hasa geDisuvudu
vasudhEshana nAma maresuvudu namma asama purandara viTTalana toredu
***

ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.

ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1

ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2

ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3

ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4

ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
***