Showing posts with label ತ್ರುಟಿಗೆ ಕ್ಷಣಕೆ ನೆನೆಮನವೇ ಹರಿಯ purandara vittala. Show all posts
Showing posts with label ತ್ರುಟಿಗೆ ಕ್ಷಣಕೆ ನೆನೆಮನವೇ ಹರಿಯ purandara vittala. Show all posts

Thursday, 5 December 2019

ತ್ರುಟಿಗೆ ಕ್ಷಣಕೆ ನೆನೆಮನವೇ ಹರಿಯ purandara vittala

ಪುರಂದರದಾಸರು
ತ್ರುಟಿಗೆ ಕ್ಷಣಕೆ ನೆನೆಮನವೇ ಹರಿಯ |ತ್ರುಟಿಗೆ ಕ್ಷಣಕೆ ನೆನೆಮನವೆ ಪ

ತ್ರುಟಿಗೆ ಕ್ಷಣಕೆ ನೆನೆ ಕ್ಷಣಕೆ ಲವಕೆ ನೆನೆ |ಘಟಿಗೆ ಘಟಿಗೆ ನೆನೆ, ಇರುಳು ಹಗಲು ನೆನೆ ಅ.ಪ

ಜಠರದಿ ಜಗತಿಗೆ ಹಿರಿಯ-ಜಗ |ನ್ನಾಟಕಮೋಹ ಸೂತ್ರಧಾರಿಯ ||ಪಟು ಹಿರಣ್ಯಾಕ್ಷ ಸಂಹಾರಿಯ |ನಿಷ್ಠುರನಾದ ಕಂಸಾರಿಯ 1

ರಣಿತ ಕಂಕಣ ನೂಪುರಿಯ-ರು |ಕ್ಮಿಣಿಯನಾಳುವ ದೊಡ್ಡ ದೊರೆಯ ||ಗುಣನಿಧಿ ಗೋವರ್ಧನಧಾರಿಯ-ನೀ- |ಕರುಣಿಯು ಅವನೆಂದರಿಯ 2

ನವನೀತದಧಿತಸ್ಕರಿಯ -ಈ |ಭವಹರಒಡೆಯನೆಂದರಿಯ ||ಜವನು ಕೇಳಲು ನಿನ್ನ ಮೊರೆಯ -ಚಿಹಿ |ಅವನ ನಾಲಗ್ಗೆ ಮುಳ್ಳು ಮುರಿಯ 3

ಮನಕಭಾಗಿಗೆ ಶ್ರುತಿಯರಿಯ -ದಂಥ |ಘನಪಾಪಿಗಳಿಗವ ದೊರೆಯ ||ನೆನೆವರ ಪಾಲಿಪುದ ಮರೆಯ -ಸು |ಮ್ಮನೆ ಇರಲವ ನಮ್ಮ ಪೊರೆಯ4

ಸ್ಮರಿಸಲು ಯಮ ನಿನ್ನ ದಾರಿಯ -ಹೋಗ |ವರಭಾರತಿಪತಿ ಮರೆಯ |ಪುರಂದರವಿಠಲ ದೊರೆಯ -ನೆನೆ-ದಿರೆ ಯಮ ನಿನ್ನನು ಕೊರೆಯ 5

ತ್ರುಟಿಗೆ ಕ್ಷಣಕೆ ನೆನೆಮನವೇ-ಹರಿಯತ್ರುಟಿಗೆ ಕ್ಷಣಕೆ ನೆನೆಮನವೇ ||
*******