ಮಧ್ವರಾಯರ ಶುದ್ಧಸಿದ್ಧಾಂತ ಪದ್ಧತಿಯಲಿ
ಇದ್ದ ಮನುಜಗೆ ಕರಸಿದ್ಧವೈಯ್ಯಾ ಮುಕುತೀ ಪ
ಬಿದ್ದು ಪೋಗುವುದಘ ವೃಂದಗಳೆಲ್ಲವು
ಶುದ್ಧe್ಞÁನದಿ ಸತ್ಯ ಉದ್ಭರಿಪ ಹರಿ ವೇದಸಿದ್ಧವಿದುಕಾಣೋ ಅ.ಪ.
ತ್ರೇತೆಲಿ ಇವರು ವಾತಸುತನು ಎನಿಸಿ
ಖ್ಯಾತಿಯಿಂದಲಿಲಂಕೆ ಸುಟ್ಟು
ಪ್ರೀತಿಲಿ ರಾಮನ ಭಜಿಸಿದರೋ
ವ್ರಾತಖಳಕುಲ ಘಾತಿ ಮಾಡಿಸಿ, ವೀತಿಹೋತ್ರಗೆ ತುತ್ತು ನೀಡುತ
ಪ್ರೀತಿಯಿಂದಲಿ ಸೇವೆಮಾಡಲು
ನಾಥರಾಮನ ವರದಿ ಮುಂದಿನ
ಧಾತನಾಗಿ ಬರುವ ನಮ್ಮ 1
ದ್ವಾಪರದಲಿವರು ಪಾಪಿ ದುರ್ಯೋಧನನ
ಭೂಪನಂದದಿ ಅಳಿಸಿ ಶ್ರೀಪತಿಸೇವೆನಡಿಸಿದರೋ
ಶ್ಯಾಮಸುಂದರ ಕೃಷ್ಣರಾಯನ ನೇಮದಿಂದಲಿನಾಮ ಪಠಿಸುತ
ತಾಮಸಾರನು ಯಮಗೆ ಕಳಿಸಿ ಕಾಮವಿಲ್ಲದೆ ಯಜ್ಞವನಡೆಸಿದ
ಭಾಮೆ ದ್ರೌಪದಿ ಪ್ರೇಮ ಪತಿಯಾದ2
ಕಲಿಯುಗ ಕಳ್ಳರು ಸಲ್ಲದರ್ಥಗಳನ್ನು
ನಿಲ್ಲದೆ ನಿಗಮಕ್ಕೆ ಮಾಡಲು ಎಲ್ಲ ಸುರರು ಮೊರೆಯಿಡಲು
ವಲ್ಲಭನು ಶ್ರೀನಲ್ಲ ನಲ್ಲದೆ ಇಲ್ಲ ಜಗದೊಳು ಎಂದು ಸ್ಥಾಪಿಸಿ
ಕ್ಷುಲ್ಲಕರ ಪಿಡಿದು ಹಲ್ಲು ಮುರಿಯುತ
ಎಲ್ಲವೇದದ ಎಲ್ಲನಾದವು
ನಲ್ಲ ಹರಿ ಯಂತೆಂದು ತೋರಿದ 3
ಜೀವೇಶ ಬೇಧವು ಪಂಚಬೇಧವು ಸುಳ್ಳು ತಾವೆ ನಾಥರು ಜಗಕೆ
ತಾರತಮ್ಯವು ಠಕ್ಕೂ ಶಿವನೆ ಸರ್ವೋತ್ತಮ ಬ್ರಹ್ಮನಿರ್ಗುಣನು
ಈ ವಿಧವಾದವ ವೇದವ್ಯಾಸರ ಕಂಡು ಬದರಿಲಿ
ಮುದದಿ ಸಾಧಿಸಿ ಸೂತ್ರ ಭಾಷ್ಯವ ಮಾಧವನೆ ಜಗದಾದಿಕಾರಣ
ನೆಂದರುಹಿ ಮಹದಾನಂದ ಶಾಸ್ತ್ರವ ನಿಂದು
ಬೋಧಿಸಿ ಮೋದ ನೀಡಿದ 4
ಮಧ್ವರಾಯರವಾಣಿ ಶುದ್ಧವೇದದಸಾರ
ವೇದವ್ಯಾಸರ ಮತವು ಇದುಸಿದ್ಧ ಹರಿ ಆಣೆ ಕೇಳಿ
ಗದ್ದರಾಗದೆ ಬಿದ್ದು ಇವರಡಿ ತಿದ್ದಿ ಮನವನು ಒದ್ದುದುರ್ಮತ
ಪದ್ಮನಾಭನ ಪಾದಧ್ಯಾನದಿ ಅದ್ದಿ ಚಿತ್ತವ
ಸಿದ್ಧಮಾಡಿರೋ ಮುಕ್ತಿಪಥವ 5
ಪರಿಸರನೀತನು ಪರಮಾಪ್ತನುಹರಿಗೆ ಗುರುವೊ ಜಗಕೆಲ್ಲ
ಬರುವ ಬ್ರಹ್ಮನು ಕಾಣೋ
ಸರಿಯು ಇಲ್ಲವು ಯಾರು ಈತಗೆ ದೂರ
ಓಡಿಸುಮಾರಿಮತಗಳ
ಈರದೇವನ ಸಾರಿಸಾರೆಲೊ ದೂರ
ಇಲ್ಲವೊ ಹರಿಯ ಧಾಮವು 6
ಮೂರುಹತ್ತು ಎರಡು ಗುರುಲಕ್ಷಣ ಕಾಯರು
ನಿರುತ ಹಂಸೋಪಾಸನೆ ಮೂರುವಿಧದಲ್ಲಿ ಮಾಳ್ವರು
ಭಾರತೀಶನ ಸಾರಗುಣಗಳ ಸೂರಿಗಳಿಗಳವಲ್ಲ ಅರಿಯಲು
ನೀರಜಾಕ್ಷನನಿರುತ ಕಾಂಬುವ ಸಮೀರ ದೇವನ
ಚರಣಪಿಡಿಯಿರೋ 7
ದಶದಿಶೆಗಳ ವಳಗೆ ಬಿಸಜನಾಭನ ಕೀರ್ತಿ
ಎಸೆದು ಹಿಗ್ಗುವ ನಮ್ಮ ಅಸಮ ಮಧ್ವರನೋಡೋ
ವ್ಯಾಸದೇವರ ಆಶೆಯಿಂದಲಿ ದೋಷe್ಞÁನವ
ನಾಶಮಾಡುತ
ತೋಷ ಬೀರುವ ಗ್ರಂಥರಾಶಿಯ ಶಿಷ್ಯರಿಗೆ
ಮಂದಿಟ್ಟು ಹರಿಯ
ಭಾಸಕರು ಎಂದೆನಿಸಿದ 8
ಅನಿಲದೇವನ ನಾಮ ಕನಸಿಲಾದರು ಒಮ್ಮೆ
ನೆನೆದವನೇ ಧನ್ಯ ಮಾನ್ಯನೋ ಜಗದೊಳಗೆ
ನಾನು ನಾನೆಂಬೋ ಹೀನಮತ ಸುಡು ಸಾನುರಾಗದಿ
ದೀನನೆನಿಸುತಲಿ
ದಾನಿ ಜಯಮುನಿ ಅನಿಲನಂತರ ಶ್ರೀನಿವಾಸ ಕೃಷ್ಣವಿಠಲಗೆ
ಶರಣು, ಶರಣು, ಶರಣೆಂದು 9
****