..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಪಾರ್ವತೀ ಸ್ತೋತ್ರ
ಅಂಬಾ ಅಚಲಸುತೆ ಅನಲಾಕ್ಷಸತಿ ನಿನ್ನ
ಅಂಬುಜ ಅಡಿಗಳಿಗೆ ಎರಗಿದೆ ಅಮ್ಮ ಪ
ಕಾರ್ತಿಕೇಯನ ಮಾತೆ ಕಾತ್ಯಾಯಿನೀ ದೇವಿ
ಅತಿದಯದಿ ಪಾಲಿಸೆನ್ನ ಕಲುಷ ಪರಿಹರಿಸೇ 1
ಗಜಮುಖನತಾಯೆ ನೀ ಗಿರಿರಾಜ ಆತ್ಮಜೆ
ವಜ್ರಿ ಮನ್ಮಥನುತೆ ಭಜಕಗೇ ಶುಭದೆ 2
ಉದಕಜಾಸನ ಪಿತ ಪ್ರಸನ್ನ ಶ್ರೀನಿವಾಸನ
ಭಕ್ತಾಗ್ರಣೀ ಸದಾಶಿವನ ಅರ್ಧಾಂಗಿ ನಮೋ 3
***